ಹಿಂದು ಧರ್ಮದಲ್ಲಿ ಗೋ ಮಾತೆಗೆ ಪವಿತ್ರ ಸ್ಥಾನವಿದೆ. ಗೋವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಯಾರ ಮನೆಯಲ್ಲಿ ಗೋವುಗಳ ಪೂಜೆಯನ್ನು ಭಯ- ಭಕ್ತಿಯಿಂದ ಮಾಡ್ತಾರೋ ಆ ಮನೆಯಲ್ಲಿ ಸುಖ- ಸಮೃದ್ಧಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.
ಗೋ ಮಾತೆಯಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಎಲ್ಲಿ ಗೋವುಗಳು ಸುಖವಾಗಿರುತ್ತವೆಯೋ ಅಲ್ಲಿ ದೇವಿ-ದೇವತೆಗಳು ಸಂತೃಪ್ತರಾಗಿರ್ತಾರೆ.
ಗೋವುಗಳಿಗೆ ಘಂಟೆ ಕಟ್ಟಬೇಕು. ಯಾರ ಮನೆಯಲ್ಲಿ ಗೋವುಗಳ ಪೂಜೆ ನಡೆಯುತ್ತದೆಯೋ ಆ ಮನೆಗೆ ಯಾವುದೇ ಕಷ್ಟಬರುವುದಿಲ್ಲ.
ಗೋ ಮಾತೆಯ ಸಗಣಿಯಲ್ಲಿ ಲಕ್ಷ್ಮಿ ವಾಸಿಸುತ್ತಾಳೆ. ಗೋ ಮಾತೆಯ ಮೂತ್ರದಲ್ಲಿ ಗಂಗೆ ನೆಲೆಸಿರುತ್ತಾಳೆ.
ಗೋ ಮಾತೆಯ ಸಗಣಿಯಿಂದ ಮಾಡಿದ ಧೂಪವನ್ನು ಪ್ರತಿದಿನ ಮನೆ, ಕಚೇರಿ, ದೇವಸ್ಥಾನದಲ್ಲಿ ಹಚ್ಚಿದ್ರೆ ಪರಿಸರ ಶುದ್ಧಗೊಳ್ಳುತ್ತದೆ. ಜೊತೆಗೆ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ.
ಗೋ ಮಾತೆಯ ಒಂದು ಕಣ್ಣಿನಲ್ಲಿ ಸೂರ್ಯ ಇನ್ನೊಂದು ಕಣ್ಣಿನಲ್ಲಿ ಚಂದ್ರ ನೆಲೆಸಿರುತ್ತಾನೆ.
ಗೋ ಮಾತೆ 14 ರತ್ನಗಳಲ್ಲಿ ಒಂದು ರತ್ನವಾಗಿದೆ. ಗೋ ಮಾತೆಯ ಪಂಚಗವ್ಯವಿಲ್ಲದೆ ಪೂಜೆಗಳು ನಡೆಯುವುದಿಲ್ಲ. ಹಾಗೆ ಪಂಚಗವ್ಯ ನೂರಾರು ರೋಗಗಳಿಗೆ ರಾಮಬಾಣ.
ಗೋ ಮಾತೆಯನ್ನು ಪೂಜೆ ಮಾಡುವ ವ್ಯಕ್ತಿಗೆ ಅಕಾಲ ಮರಣ ಬರುವುದಿಲ್ಲ.