ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನ ಸ್ಯಾಂಡಲ್ವುಡ್ನ ಕಾಮಿಡಿ ಕಿಂಗ್ ಚಿಕ್ಕಣ್ಣ ಭೇಟಿಯಾಗಿದ್ದಾರೆ. ಇವರಿಬ್ಬರು ಕರ್ನಾಟಕದಲ್ಲೊ, ಬೆಂಗಳೂರಲ್ಲೊ ಭೇಟಿಯಾಗಿಲ್ಲ. ಬದಲಿಗೆ ಗೋವಾದಲ್ಲಿ ಮೀಟ್ ಆಗಿದ್ದಾರೆ.
ಹೌದು, ಸಿದ್ದರಾಮಯ್ಯ ಹಾಗೂ ಚಿಕ್ಕಣ್ಣನವರು ಗೋವಾದಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಚಿತ್ರವನ್ನು ನೋಡುತ್ತಿದ್ದರೆ ಯಾವುದೋ ರೆಸ್ಟೋರೆಂಟ್ ನಲ್ಲಿ ಭೇಟಿಯಾಗಿರಬಹುದೆಂದು ಸ್ಪಷ್ಟವಾಗಿ ಕಾಣಿಸುತ್ತದೆ. ಚಿಕ್ಕಣ್ಣನವರ ಜೊತೆಗಾರರು ಸಹ ಅವರ ಹಿಂದೆ ನಿಂತಿರುವುದನ್ನ ಕಾಣಬಹುದು.
BIG NEWS: ಚಾಲಕರು, ಕಂಡಕ್ಟರುಗಳಿಗೆ ಅಗ್ನಿಶಾಮಕ ತರಬೇತಿ ನೀಡಲು ಮುಂದಾದ ಬಿಎಂಟಿಸಿ
ಗೋವಾ ಚುನಾವಣಾ ಪ್ರಚಾರದಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿರುವ ಸಿದ್ದರಾಮಯ್ಯನವರು ಗೋವಾದಲ್ಲೆ ಬೀಡು ಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರೊಂದಿಗೆ ಚುನಾವಣಾ ಪ್ರಚಾರದಲ್ಲಿಯೂ ಭಾಗಿಯಾಗಿದ್ದಾರೆ. ಈ ನಡುವೆ ಚಿಕ್ಕಣ್ಣ ಅವರನ್ನ ಆಕಸ್ಮಿಕವಾಗಿ ಭೇಟಿಯಾಗಿದ್ದು, ಇಬ್ಬರು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.