ಹಸುವಿನ ಸಗಣಿ ಹಾಗೂ ಗಂಜಲದಲ್ಲಿ ಔಷಧೀಯ ಗುಣಗಳಿವೆ ಎಂದು ಬಹಳಷ್ಟು ಮಂದಿ ನಂಬಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯರು ಸಹ ಈ ಮಾತಿಗೆ ಪುಷ್ಟೀಕರಣ ನೀಡಲು ಖುದ್ದು ತಾವೇ ಮುಂದೆ ಬಂದಿದ್ದಾರೆ.
ಡಾ. ಮನೋಜ್ ಮಿತ್ತಲ್ ಹೆಸರಿನ ಈ ವೈದ್ಯರು ಗೋಶಾಲೆಯೊಂದರಲ್ಲಿ ನಿಂತುಕೊಂಡು ಸಗಣಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ತಾವು ಎಂಬಿಬಿಎಸ್ ಹಾಗೂ ಎಂಡಿ ಪದವೀಧರರಾಗಿದ್ದು, ಹರಿಯಾಣಾದ ಕರ್ನಲ್‌ನಲ್ಲಿ ಮಕ್ಕಳ ತಜ್ಞರಾಗಿರುವುದಾಗಿ ಟ್ವಿಟರ್‌ನಲ್ಲಿರುವ ತಮ್ಮ ಪ್ರೊಫೈಲ್‌ನಲ್ಲಿ ವೈದ್ಯರು ಹೇಳಿಕೊಂಡಿದ್ದಾರೆ.
ಗೋವಿನ ಸಗಣಿ ಹಾಗೂ ಮೂತ್ರ ಸೇವನೆಯಿಂದ ಗಂಭೀರ ಕಾಯಿಲೆಗಳನ್ನು ದೂರ ಇಡಬಹುದು ಎಂದು ವೈದ್ಯರು ಸಗಣಿ ತಿನ್ನುತ್ತಲೇ ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಮಹಿಳೆಯರು ಸಗಣಿಯನ್ನು ತಿಂದರೆ ಹೆರಿಗೆ ಸಹಜವಾಗಿಯೇ ಆಗುವುದರಿಂದ ಸಿಸೇರಿಯನ್ ಮಾಡಬೇಕಾದ ಅಗತ್ಯವೇ ಇರುವುದಿಲ್ಲ ಎಂದಿದ್ದಾರೆ ಈ ವೈದ್ಯರು.
“ಗೋವಿಂದ ಪಡೆಯಲಾಗುವ ಪಂಚಗವ್ಯದ ಪ್ರತಿಯೊಂದು ಭಾಗವೂ ಸಹ ಮನುಕುಲಕ್ಕೆ ಅಮೂಲ್ಯವಾದದ್ದು. ಸಗಣಿ ಸೇವನೆಯಿಂದ ದೇಹ ಹಾಗೂ ಹೃದಯ ಶುದ್ಧಿಯಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ. ನಮ್ಮ ದೇಹವನ್ನು ಸಗಣಿ ಹೊಕ್ಕುತ್ತಲೇ ಶುದ್ಧಗೊಳಿಸುತ್ತದೆ,” ಎಂದು ಮನೋಜ್ ಹೇಳಿಕೊಂಡಿದ್ದಾರೆ.
ಮನೋಜ್ ಮಿತ್ತಲ್‌ರ ಈ ಸಲಹೆಗೆ ಟ್ವಿಟರ್‌ನಲ್ಲಿ ನೆಟ್ಟಿಗರಿಂದ ಬಹಳಷ್ಟು ವಿನೋದಮಯ ಪ್ರತಿಕ್ರಿಯೆಗಳು ಬಂದಿವೆ.
https://twitter.com/RoflGandhi_/status/1460559424813080577?ref_src=twsrc%5Etfw%7Ctwcamp%5Etweetembed%7Ctwterm%5E1460559424813080577%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-doctor-eats-cow-dung-on-camera-claims-it-purifies-body-mind-soul-twitter-reacts-watch-5099266%2F