ಮಕ್ಕಳಿಗೆ ಬ್ರೌನಿ, ಕೇಕ್ ಎಂದರೆ ತುಂಬಾ ಇಷ್ಟ. ಮೈದಾ ಹಿಟ್ಟಿನ ಬದಲು ಗೋಧಿಹಿಟ್ಟನ್ನು ಬಳಸಿಕೊಂಡು ರುಚಿಕರವಾದ ಬ್ರೌನಿ ಮಾಡಿಕೊಡಿ. ಇದು ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು-2 ಕಪ್, ಕೊಕೊಪೌಡರ್-2/3 ಕಪ್, ಸಕ್ಕರೆ-2 ಕಪ್, ಉಪ್ಪು-1/2 ಟೀ ಸ್ಪೂನ್, ಬೇಕಿಂಗ್ ಪೌಡರ್-3 ಟೀ ಸ್ಪೂನ್, ಮೊಸರು-1 ½ ಕಪ್, ಎಣ್ಣೆ-1 ಕಪ್, ನೀರು-1/4 ಕಪ್, ವೆನಿಲ್ಲಾ ಎಸೆನ್ಸ್-1 ಟೇಬಲ್ ಸ್ಪೂನ್, ವಾಲ್ ನಟ್ -1/4 ಕಪ್ ಸಣ್ಣದ್ದಾಗಿ ಕತ್ತರಿಸಿದ್ದು.
ಮಾಡುವ ವಿಧಾನ:
ಒಂದು ಬೌಲ್ ಗೆ ಗೋಧಿಹಿಟ್ಟು, ಬೇಕಿಂಗ್ ಪೌಡರ್, ಕೊಕೊ ಪೌಡರ್, ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಸಕ್ಕರೆ ಮಿಕ್ಸ್ ಮಾಡಿ. ಇನ್ನೊಂದು ಬೌಲ್ ಗೆ ಮೊಸರು, ವೆನಿಲ್ಲಾ ಎಸೆನ್ಸ್, ಎಣ್ಣೆ ಹಾಕಿ ಮಿಕ್ಸ್ ಮಾಡಿ. ಇದನ್ನು ಹಿಟ್ಟಿರುವ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತುಂಬಾ ತೆಳುವಾಗಿ ಮಾಡಬೇಡಿ.
ನಂತರ ಬೇಕಿಂಗ್ ಟ್ರೇಗೆ ಇದನ್ನು ಹಾಕಿ ಇದರ ಮೇಲೆ ವಾಲ್ ನಟ್ ಅನ್ನು ಉದುರಿಸಿ. ಮೊದಲೇ ಪ್ರಿ ಹೀಟ್ ಮಾಡಿಕೊಂಡ ಒವೆನ್ ನಲ್ಲಿ 40 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದು ತಣ್ಣಗಾದ ಮೇಲೆ ಕತ್ತರಿಸಿಕೊಳ್ಳಿ.