ದೇಹ ತೂಕ ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯ ಕಾಪಾಡುವಲ್ಲಿ ಗೋಧಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಪುಡಿ ಮಾಡಿದ ಗೋಧಿಯನ್ನು ಬಳಸುವುದಕ್ಕಿಂತಲೂ ಡಯಟ್ ಪ್ರಿಯರು ಇಡೀ ಗೋಧಿಯನ್ನೇ ಆಹಾರ ರೂಪದಲ್ಲಿ ಸೇವಿಸಬೇಕು ಎಂಬುದನ್ನು ಸಂಶೋಧನೆಯೊಂದು ಹೊರಗೆಡವಿದೆ.
ಇದು ಶಕ್ತಿಯ ಮೂಲವಾಗಿದೆ ಮತ್ತು ಸಂಸ್ಕರಿಸದ ರೂಪದಲ್ಲಿ ಸೇವಿಸಿದರೆ ದೇಹಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ. ಇದರಲ್ಲಿ ಅಧಿಕ ನಾರಿನಂಶವಿದ್ದು ಇದು ಕರುಳಿಗೆ ಒಳ್ಳೆಯದು ಮತ್ತು ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧವಾಗುತ್ತದೆ.
ಇಡೀ ಗೋಧಿಯನ್ನು ಹೇಗೆ ಸೇವಿಸುವುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಇಲ್ಲಿದೆ ಉತ್ತರ. ಸಾಂಪ್ರದಾಯಿಕವಾಗಿ ಅಕ್ಕಿಯಿಂದ ಖೀರ್ ತಯಾರಿಸಿದಂತೆ ಗೋಧಿಯಿಂದಲೂ ಪಾಯಸ ತಯಾರಿಸಬಹುದು. ಇದರಲ್ಲಿ ಸಂಸ್ಕರಿಸಿದ ಸಕ್ಕರೆ ಬದಲು ಬೆಲ್ಲವನ್ನು ಬಳಸಿ
ಗೋಧಿಯನ್ನು ಚೆನ್ನಾಗಿ ತೊಳೆದು ಎಂಟು ಗಂಟೆ ಹೊತ್ತು ನೆನೆಸಿ ಗ್ರೈಂಡರ್ನಲ್ಲಿ ರುಬ್ಬಿ ರುಚಿಕರವಾದ ದೋಸೆ ತಯಾರಿಸಬಹುದು. ಬೇಕಿದ್ದರೆ ಇದಕ್ಕೆ ಮಸಾಲೆ ಖಾರವನ್ನೂ ಸೇರಿಸಿಕೊಳ್ಳಬಹುದು. ಗೋಧಿಯ ಪಾಸ್ತಾ ತಯಾರಿಸಬಹುದು. ಗೋಧಿ ಕೇಕ್ ತಯಾರಿಗೆ ಗೋಧಿಯೊಂದಿಗೆ ಬೆಲ್ಲವನ್ನೂ ಬೆರೆಸಲಾಗುತ್ತದೆ. ಗೋಧಿ ಕುಕ್ಕೀಸ್ ತಯಾರಿಸುವ ವಿಧಾನವೂ ಸುಲಭವಾಗಿದೆ.