ಗೋಧಿ ಧಾನ್ಯಗಳಿಂದ ತಯಾರಿಸಿದ ಎಣ್ಣೆ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ. ಇದರಲ್ಲಿ ವಿಟಮಿನ್ ಬಿ6, ಪೋಲಿಕ್ ಆಸಿಡ್, ಮೆಗ್ನೀಶಿಯಂ, ಪೊಟ್ಯಾಶಿಯಂ, ರಂಜಕ, ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ. ಇದು ಕೂದಲು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಅದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಗೋಧಿ ಎಣ್ಣೆಗೆ ತೆಂಗಿನೆಣ್ಣೆ ಅಥವಾ ಆಲಿವ್ ಆಯಿಲ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿರುವ ಕಲೆಗಳು ಮಾಯವಾಗುತ್ತದೆ. ಇದನ್ನು ಪ್ರತಿದಿನ ಫೇಸ್ ಕ್ಲೆನ್ಸರ್ ಆಗಿ ಮತ್ತು ದಿನಕ್ಕೆ 2 ಬಾರಿ ಮಾಯಿಶ್ಚರೈಸರ್ ಮತ್ತು ಆಂಟಿ ಏಜಿಂಗ್ ಕ್ರೀಂ ರೀತಿ ಬಳಸಬಹುದು. ಇದರಲ್ಲಿ ಉರಿಯೂತದ ಗುಣಗಳಿರುವುದರಿಂದ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಕೆಂಪಾಗುವುದು ಮತ್ತು ಅಲರ್ಜಿಯಾಗುವುದನ್ನು ಶಮನಗೊಳಿಸುತ್ತದೆ.
ಹಾಗೇ ಗೋಧಿ ಎಣ್ಣೆಗೆ ತೆಂಗಿನೆಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡುವುದಿಂದ ಕೂದಲು ಉದ್ದವಾಗಿ ಬೆಳೆಯುತ್ತದೆ. ಕೂದಲು ತೇವಾಂಶದಿಂದ ಕೂಡಿರುತ್ತದೆ. ಕೂದಲುದುರುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕೂದಲು ರೇಷ್ಮೆಯಂತೆ ಮೃದುವಾಗಿ ಹೊಳೆಯುತ್ತದೆ.