ಫೋಟೋಕ್ಕೂ ನಿಮ್ಮ ಅದೃಷ್ಟ-ದುರಾದೃಷ್ಟಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಮನೆ, ಕಚೇರಿಯ ಗೋಡೆಗಳಿಗೆ ಹಾಕುವ ಫೋಟೋಗಳು ನಿಮ್ಮ ಮನೆ-ಮನಸ್ಸಿಗೆ ಶಾಂತಿ ನೀಡುವ ಹಾಗೆ ಕೆಡಿಸುವ ಶಕ್ತಿಯನ್ನು ಹೊಂದಿದೆ.
ಗೋಡೆ ಮೇಲೆ ಹಾಕುವ ಫೋಟೋಗಳು ನಿಮ್ಮ ಜೀವನದಲ್ಲಿ ಸುಖ-ಸಮೃದ್ಧಿಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಗೋಡೆ ಮೇಲಿರುವ ಫೋಟೋಗಳು ನಿಮ್ಮ ಅದೃಷ್ಟದ ಬಾಗಿಲನ್ನು ತೆರೆಸಲಿವೆ.
ಸಕಾರಾತ್ಮಕ ಶಕ್ತಿ ವೃದ್ಧಿಗಾಗಿ ಮನೆಯ ಗೋಡೆ ಮೇಲೆ ನಗ್ತಾ ಇರುವ ಮಕ್ಕಳ ಫೋಟೋಗಳನ್ನು ಹಾಕಬೇಕು.
ಯಾವುದೇ ಕಾರಣಕ್ಕೂ ಗೋಡೆಗಳ ಮೇಲೆ ಕಾಡು ಮೃಗಗಳ ಫೋಟೋಗಳನ್ನು ಹಾಕಬೇಡಿ. ಇದು ಮನುಷ್ಯನ ಕ್ರೋಧವನ್ನು ಹೆಚ್ಚು ಮಾಡುತ್ತದೆ.
ಮನೆಯಲ್ಲಿ ನಾಯಿ ಹಾಗೂ ಕುದುರೆಯ ಫೋಟೋಗಳನ್ನು ಹಾಕಬಹುದು. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.
ಮನೆಯ ಗೋಡೆಯ ಮೇಲಿರುವ ಫೋಟೋಗಳು ಮನುಷ್ಯನ ಗ್ರಹ-ನಕ್ಷತ್ರದ ಮೇಲೆ ಪ್ರಭಾವ ಬೀರುತ್ತದೆ.
ಉಕ್ಕಿ ಹರಿಯುತ್ತಿರುವ ಸಮುದ್ರದ ಫೋಟೋ ಅಥವಾ ಹೆದರಿಕೆ ಹುಟ್ಟಿಸುವ ಫೋಟೋಗಳನ್ನು ಹಾಕಬೇಡಿ. ಇದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ.
ಮನೆಯ ಯಾವುದೇ ಕೋಣೆಯಲ್ಲಿ ಮಹಾಭಾರತ ಯುದ್ಧದ ಫೋಟೋಗಳನ್ನು ಹಾಕಬೇಡಿ. ಇದ್ರಿಂದ ಮನೆಯಲ್ಲಿ ಜಗಳಗಳಾಗುತ್ತವೆ.
ಖಾಲಿ ಫೋಟೋ ಪ್ರೇಮ್ ಗಳನ್ನು ಇಡಬೇಡಿ. ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಮನೆಯಲ್ಲಿ ಹಾಕುವ ಫೋಟೋ ನಮ್ಮ ವ್ಯವಹಾರ ಹಾಗೂ ಕೆಲಸದ ಮೇಲೆ ಪ್ರಭಾವ ಬೀರುತ್ತದೆ.
ದೇವರ ಕೋಣೆಯಲ್ಲಿ ಬೇರೆ ಬೇರೆ ಫೋಟೋಗಳನ್ನು ಹಾಕಲಾಗುತ್ತದೆ. ಕೆಲವೊಂದು ಫೋಟೋ ದೊಡ್ಡದಿದ್ದರೆ ಮತ್ತೆ ಕೆಲ ಫೋಟೋಗಳು ಚಿಕ್ಕದಾಗಿರುತ್ತವೆ. ಅವು ನಮ್ಮ ಮನಸ್ಸಿನ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವರ ಮನೆಯಲ್ಲಿ ಫೋಟೋ ಇಡುವಾಗ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ದೇವಾನುದೇವತೆಗಳು ಹಾಗೂ ಗುರುವಿನ ಫೋಟೋಗಳನ್ನು ದೇವರ ಮನೆಯಲ್ಲಿ ಹಾಕಬೇಕು. ಇದು ಸ್ಪಷ್ಟ ಹಾಗೂ ಸುಂದರವಾಗಿದ್ದರೆ ಒಳ್ಳೆಯದು.
ತುಂಬಾ ಫೋಟೋಗಳನ್ನು ದೇವರ ಮನೆಯಲ್ಲಿ ಹಾಕಬಾರದು. ಹಾಗೆ ಫೋಟೋಗಳು ನಮ್ಮ ಕಣ್ಣಿನ ಅಂತರಕ್ಕಿಂತ ಮೇಲೆ ಅಥವಾ ತುಂಬಾ ಕೆಳಗೆ ಕೂಡ ಇರಬಾರದು.
ಮಲಗುವ ಕೋಣೆಯಲ್ಲಿ ಮದುವೆಯಾದ ಸಂದರ್ಭದ ಫೋಟೋ ಅಥವಾ ದಂಪತಿ ಒಟ್ಟಿಗಿರುವ ಫೋಟೋವನ್ನು ಹಾಕಬೇಕು.
ತಂದೆ-ತಾಯಿ ಹಾಗೂ ಸಹೋದರರ ಫೋಟೋವನ್ನು ಉತ್ತರ ದಿಕ್ಕಿಗೆ ಹಾಕಿ.
ಮೃತ ವ್ಯಕ್ತಿಯ ಫೋಟೋಗಳನ್ನು ದಕ್ಷಿಣದ ಗೋಡೆಗೆ ಹಾಕಿ.
ಮನೆಯಲ್ಲಿ ಪ್ರೀತಿ ಹೆಚ್ಚಿಸಲು ಊಟದ ಹಾಲ್ ಬಳಿ ಹೂವಿನ ಫೋಟೋ ಹಾಕಿ.
ಆರ್ಥಿಕ ವೃದ್ಧಿಗಾಗಿ ದೇವರ ಮನೆಯಲ್ಲಿ ಕುಳಿತಿರುವ ಲಕ್ಷ್ಮಿಯ ಫೋಟೋ ಹಾಕಿ.
ಸಂತಾನಕ್ಕಾಗಿ ಮಲಗುವ ಕೋಣೆಯಲ್ಲಿ ಕಮಲದ ಹೂ ಅಥವಾ ಹಸುವಿನ ಫೋಟೋ ಹಾಕಬೇಕು.