ಗೋಡಂಬಿ ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಹೇರಳವಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿಯ ಪಾತ್ರ ಮಹತ್ವದ್ದು.
ಗೋಡಂಬಿಯನ್ನು ತಿನ್ನುವುದರಿಂದ ಹೃದಯದ ಸ್ನಾಯುಗಳು ಬಲವಾಗುತ್ತವೆ.
ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕ್ಯಾಲ್ಸಿಯಂ ಮೆಗ್ನಿಶಿಯಮ್ ಹಾಗೂ ಪೊಟ್ಯಾಷಿಯಂ ಇರುವುದರಿಂದ ಮೂಳೆ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಗೋಡಂಬಿಯಲ್ಲಿ ವಿಟಮಿನ್ ಕೆ ಇರುವುದರಿಂದ ಇದು ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಕಣ್ಣುಗಳನ್ನು ಹಾಗೂ ಕಣ್ಣಿನ ಪೊರೆಗಳನ್ನು ರಕ್ಷಿಸಲು ಗೋಡಂಬಿ ಸಹಕರಿಸುತ್ತದೆ.
ಗೋಡಂಬಿ ದಿನನಿತ್ಯ ತಿಂದರೆ ಒಳ್ಳೆಯದು. ಬಾದಾಮಿ ಗೋಡಂಬಿಗಳನ್ನು ಬೆಳಿಗ್ಗೆ ತಿಂಡಿಗೆ ಮುನ್ನ ತಿನ್ನುವುದರಿಂದ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಗೋಡಂಬಿ ಸೇವನೆ ಮಾಡಿದರೆ ಮಿನರಲ್ಸ್ ಹಾಗೂ ವಿಟಮಿನ್ ಗಳು ದೇಹಕ್ಕೆ ಹೇರಳವಾಗಿ ಸಿಗುತ್ತವೆ.