ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬಾಯಿ ತೆರೆದು ಮಲಗುವುದರಿಂದ ಹಾಗೂ ಟಾನ್ಸಿಲ್ ಹಿಂದಿನ ಮೃದು ಪ್ಯಾಲೆಟ್ ಕಂಪನದಿಂದ ಗೊರಕೆ ಬರುತ್ತದೆ. ಗೊರಕೆ ಕೇವಲ ಶಬ್ಧ ಮಾತ್ರವಲ್ಲ, ಇದೊಂದು ಆರೋಗ್ಯ ಸಮಸ್ಯೆ. ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.
ಗೊರಕೆ ವಿಚಲಿತ ನಿದ್ದೆಯ ಸಂಕೇತ, ಇದರಿಂದ ಆರೋಗ್ಯ ಹದಗೆಡಬಹುದು. ಮದ್ಯಪಾನ ಕೂಡ ಗೊರಕೆಗೆ ಒಂದು ಕಾರಣ. ಉಸಿರುಗಟ್ಟುವಿಕೆ, ಅಧಿಕ ರಕ್ತದೊತ್ತಡದಿಂದ್ಲೂ ಗೊರಕೆ ಸಮಸ್ಯೆ ಉದ್ಭವಿಸುತ್ತದೆ. ಇದು ಉಲ್ಬಣಗೊಂಡಲ್ಲಿ ಹೃದಯಾಘಾತಕ್ಕೂ ಕಾರಣವಾಗುತ್ತದೆ.
ಸ್ಲೀಪ್ ಅಪ್ನಿಯಾ ಸಮಸ್ಯೆ ಇರುವವರಿಗೆ ಹೃದಯಾಘಾತ ಉಂಟಾಗುವ ಸಂಭವ ಹೆಚ್ಚು. ಟಾನ್ಸಿಲ್ ದೊಡ್ಡದಾಗಿದ್ದರೆ, ಮೂಗಿನಲ್ಲಿ ಸೈನಸ್ ದಟ್ಟಣೆ, ಮೂಗಿನ ಪೊರೆ ಬಾಗಿದ್ದರೆ, ಹೊಟ್ಟೆಯ ಬಲದ ಮೇಲೆ ಮಲಗಿದರೆ, ಮದ್ಯಪಾನ, ಧೂಮಪಾನ, ನೋವು ನಿವಾರಕ ಮಾತ್ರೆಗಳ ಸೇವನೆ ಇವೆಲ್ಲವೂ ಗೊರಕೆಗೆ ಪ್ರಮುಖ ಕಾರಣಗಳು. ಗೊರಕೆ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಿ.
ಒಂದು ಮಗ್ಗುಲಿನಲ್ಲಿ ಮಲಗುವುದರಿಂದ್ಲೂ ಗೊರಕೆಯ ಸದ್ದು ಕಡಿಮೆಯಾಗುತ್ತದೆ. ವಿಶೇಷ ದಿಂಬನ್ನು ಕೂಡ ನೀವು ಬಳಸಬಹುದು. ತಲೆಯ ಭಾಗಕ್ಕಿಂತ ಕತ್ತಿನ ಭಾಗ ಕೊಂಚ ಮೇಲಕ್ಕಿದ್ದರೆ ಗೊರಕೆ ಬರುವುದಿಲ್ಲ. ತೂಕ ಜಾಸ್ತಿ ಇದ್ದಲ್ಲಿ, ಅದರಲ್ಲೂ ಹೊಟ್ಟೆ ಬಂದಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಿ. ಯಾಕಂದ್ರೆ ಅದು ಕೂಡ ಗೊರಕೆಗೆ ಒಂದು ಕಾರಣ. ಧೂಮಪಾನ, ಮದ್ಯಪಾನ ಬಿಟ್ಟುಬಿಡಿ. ನೀವು ನಕಲಿ ಹಲ್ಲುಗಳನ್ನು ಅಳವಡಿಸಿಕೊಂಡಿದ್ದಲ್ಲಿ, ಮಲಗುವ ಸಮಯದಲ್ಲಿ ಅದನ್ನು ತೆಗೆದಿಟ್ಟುಕೊಳ್ಳಿ.