ತನ್ನ ಗೆಳೆಯನ ಎದುರು ಹೂಸು ಬಿಡದೇ ನಿಯಂತ್ರಿಸಿಕೊಂಡಿದ್ದಕ್ಕೆ ಬ್ರೆಜಿಲ್ನ ಖ್ಯಾತ ಗಾಯಕಿ ಆಸ್ಪತ್ರೆ ಸೇರಿದ್ದಾರೆ. ಈ ಬಗ್ಗೆ ಸ್ವತಃ ಗಾಯಕಿ ವಿವಿಯಾನ್ ಡಿ ಕ್ವಿರೋಜ್ ಪೆರೇರಾ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.
27 ವರ್ಷದ ಈ ಖ್ಯಾತ ಗಾಯಕಿ ತಮಗಿದ್ದ ಗ್ಯಾಸ್ ಸಮಸ್ಯೆಯನ್ನು 15.7 ಮಿಲಿಯನ್ ಫಾಲೋವರ್ಸ್ ಎದುರು ಹಂಚಿಕೊಂಡಿದ್ದಾರೆ. ನಾನು ಬೆಳಗ್ಗೆ 5:30ಕ್ಕೆ ಎದ್ದಿದ್ದೆ. ನನಗೆ ತುಂಬಾ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಸೀದಾ ನಾನು ಆಸ್ಪತ್ರೆಗೆ ದಾಖಲಾದೆ ಎಂದು ಪೆರೇರಾ ಹೇಳಿಕೊಂಡಿದ್ದಾರೆ. ಆದರೆ ಈಗ ನಾನು ಆರಾಮಾಗಿ ಇದ್ದೇನೆ. ಹೂಸುಗಳಿಂದಾಗಿ ನಾನು ಆಸ್ಪತ್ರೆ ಸೇರುವಂತಾಯ್ತು ಎಂದು ಕೂಡ ಅವರು ಬರೆದಿದ್ದಾರೆ.
ನಿಮಗೆ ಅಸ್ವಸ್ಥತೆ ಉಂಟಾಗಿದೆ ಎಂದು ನಿಮ್ಮ ಬಾಯ್ಫ್ರೆಂಡ್ ನಿದ್ದೆ ಹಾಳು ಮಾಡುವುದು. ಹಾಗೂ ನೀವು ಬಾಯ್ಫ್ರೆಂಡ್ ಜೊತೆಯಲ್ಲಿ ಆಸ್ಪತ್ರೆಗೆ ತೆರಳಿ ಅಲ್ಲಿ ಪರೀಕ್ಷೆಗೆ ಒಳಗಾದಾಗ ಹೂಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದು ತಿಳಿದುಕೊಳ್ಳುವುದು ನಿಜಕ್ಕೂ ಮುಜುಗರದ ಸಂಗತಿಯಾಗಿದೆ. ನಾನು ಈಗ ಆರಾಮಾಗಿ ಇದ್ದೇನೆ ಎಂದು ಪೆರೇರಾ ತನ್ನ ಫಾಲೋವರ್ಸ್ಗೆ ಮಾಹಿತಿ ನೀಡಿದ್ದಾರೆ.