
ಹೌದು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ, ಆರ್ಥಿಕ ಸಹಾಯ ಕೇಳಿದ ಅಭಿಮಾನಿಗೆ ಸ್ಪಂದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಆದಿತ್ಯ ಕುಮಾರ್ ಸಿಂಗ್ ಎಂಬಾತ ಟ್ವೀಟ್ ಮಾಡಿ ಗೆಳತಿ ಜೊತೆಗೆ ಡೇಟಿಂಗ್ ಹೋಗಲು 300 ರೂಪಾಯಿ ನೀಡುವಂತೆ ಅಮಿತ್ ಮಿಶ್ರಾ ಅವರ ಮುಂದೆ ಬೇಡಿಕೆ ಇಟ್ಟಿದ್ದ. ಜೊತೆಗೆ ಯುಪಿಐ ಕ್ಯೂಆರ್ ಕೋಡ್ ಅನ್ನೂ ಹಂಚಿಕೊಂಡಿದ್ದ.
ಇದನ್ನು ಅಮಿತ್ ಮಿಶ್ರಾ ನಿರ್ಲಕ್ಷ್ಯ ಮಾಡುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಚ್ಚರಿ ಎಂಬಂತೆ 300 ಬದಲು 500 ರೂಪಾಯಿ ಕಳಿಸಿದ ಅಮಿತ್ ಮಿಶ್ರಾ, ಡೇಟಿಂಗ್ ಗೆ ಶುಭಾಶಯ ಎಂದಿದ್ದಾರೆ. ಇದಕ್ಕೆ ಮರು ಉತ್ತರಿಸಿದ ಆದಿತ್ಯ, ನಿಮ್ಮ ಉಡುಗೊರೆಗೆ ಧನ್ಯವಾದಗಳು. ಲವ್ ಯು ಸರ್ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.