’ಜಗತ್ತಲ್ಲಿ ಇಂಥ ಜನರೂ ಇದ್ದಾರಾ?’ ಎಂದು ಅಚ್ಚರಿ ಪಡುವ ಘಟನೆಯೊಂದರಲ್ಲಿ ಮಧ್ಯ ಪ್ರದೇಶದ ಯುವತಿಯೊಬ್ಬರು ತಮ್ಮ ಬಾಯ್ ಫ್ರೆಂಡ್ ತಮ್ಮೊಂದಿಗೆ ಮಾತನಾಡಲು ನಿಲ್ಲಿಸಿದ ಎಂಬ ಕಾರಣಕ್ಕೆ ಪೊಲೀಸರ ಮೊರೆ ಹೋಗಿದ್ದಾರೆ.
ರಾಜ್ಯದ ಛಿಂದ್ವಾರಾ ಎಂಬ ಊರಿನ ಈ ಯುವತಿ ಸರಣಿ ಎಂಬ ಊರಿನ ವ್ಯಕ್ತಿಯೊಂದಿಗೆ ರೊಮ್ಯಾಂಟಿಕ್ ಸಂಬಂಧದಲ್ಲಿದ್ದಾರೆ. ತನ್ನ ಹುಟ್ಟುಹಬ್ಬದಂದು ತನ್ನಾಕೆ ವಿಶ್ ಮಾಡಲಿಲ್ಲವೆಂಬ ಕಾರಣಕ್ಕೆ ಈ ಯುವತಿಯ ಬಾಯ್‌ಫ್ರೆಂಡ್ ಮುನಿಸಿಕೊಂಡು ಆಕೆಯೊಂದಿಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದ. ಆಕೆಯೊಂದಿಗೆ ಜಗಳವಾಡಿ ಮಾತನಾಡುವುದನ್ನೇ ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿದ್ದ.
ಇದಾದ ಬಳಿಕ ಆತನನ್ನು ಮತ್ತೆ ಒಲಿಸಿಕೊಳ್ಳಲು ಈಕೆ ಮಾಡಿದ ಬಹಳಷ್ಟು ಪ್ರಯತ್ನಗಳು ಕೈಗೂಡಲಿಲ್ಲ. ಇದರಿಂದ ರೋಸಿ ಹೋದ ಯುವತಿ ತನ್ನ ಬಾಯ್ ಫ್ರೆಂಡ್ ಅನ್ನು ಮರಳಿ ಪಡೆಯಲು ಪೊಲೀಸ್ ಠಾಣೆಗೆ ಹೋಗಿದ್ದಾಳೆ.
ಯುವತಿಯ ಬಾಯ್‌ಫ್ರೆಂಡ್ ಅನ್ನು ಠಾಣೆಗೆ ಕರೆಯಿಸಿದ ಪೊಲೀಸರು ಕೆಲ ಕಾಲ ಇಬ್ಬರಿಗೂ ಕೌನ್ಸೆಲಿಂಗ್ ಮಾಡಿದ್ದಾರೆ. ಬಳಿಕ ಇಬ್ಬರಿಗೂ ಮದುವೆ ಮಾಡಿಕೊಳ್ಳಲು ಸೂಚಿಸಿದ್ದಾರೆ. ಇದಕ್ಕೆ ಇಬ್ಬರ ಕುಟುಂಬದವರೂ ಒಪ್ಪಿಕೊಂಡಿದ್ದಾರೆ. ಇದಾದ ಬಳಿಕ ಇಲ್ಲಿನ ಆರ್ಯ ಸಮಾಜ್ ಮಂದಿರದಲ್ಲಿ ಜೋಡಿಯ ಮದುವೆಯೂ ಆಗಿಹೋಗಿದೆ.