ಎಂಇಎಸ್ ಪುಂಡಾಟದ ವಿರುದ್ಧ ಸಿಡಿದೆದ್ದಿರೋ ಕನ್ನಡ ಪರ ಹೋರಾಟಗಾರರು ಕರ್ನಾಟಕವನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ. ಡಿಸೆಂಬರ್ 31 ಕ್ಕೆ ನಡೆಯಲಿರುವ ಬಂದ್ ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಕನ್ನಡ ಸಂಘಟನೆಗಳ ಮನವಿ ಮಾಡಿವೆ. ಟೌನ್ ಹಾಲ್ ಬಳಿ ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ, ಕೈ ಮುಗಿದು ಬಂದ್ ಗೆ ಬೆಂಬಲ ನೀಡಿ ಎಂದು ಕನ್ನಡ ಪರ ಸಂಘಟನೆಗಳು ವಿಭಿನ್ನವಾಗಿ ಅಭಿಯಾನ ನಡೆಸಿದ್ದಾರೆ.
ʼಪಮಾಮ ಪೇಪರ್ಸ್ʼ ವಿಚಾರಣೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ರೈ ಮೊದಲ ಪೋಸ್ಟ್
ಈ ಬಗ್ಗೆ ಮಾತನಾಡಿರುವ ಸಾ.ರಾ. ಗೋವಿಂದು, ಕಾರ್ಮಿಕ ಸಂಘಟನೆಗಳು ಬಂದ್ ಹಿನ್ನಲೆ ಒಳ್ಳೆಯ ಅಭಿಯಾನ ಮಾಡುತ್ತಿವೆ. ವಾಟಾಳ್ ನಾಗರಾಜ್ , ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿರೋದು ಸ್ವಾಗತಾರ್ಹ. ಕರ್ನಾಟಕದಲ್ಲಿ ಎಂಇಎಸ್ ನಿಷೇಧ ಆಗಬೇಕು, ಇದು ಕನ್ನಡಿಗರ ಅಳಿವು ಉಳಿವಿನ ಪಶ್ನೆ. ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡುವ ಮೂಲಕ, ಶಿವಾಜಿ ಪ್ರತಿಮೆಗೆ ಮಸಿ ಬಳಿಯೋದಕ್ಕೆ ಎಂಇಎಸ್ ಪ್ರಚೋದನೆ ನೀಡಿದೆ. ಬಂಧನವಾಗಿರುವ ಕನ್ನಡಿಗರನ್ನ ಬಿಡುಗಡೆ ಮಾಡಿ ಎಂದು ಗೃಹಮಂತ್ರಿಯವರಿಗೆ ಮನವಿ ಮಾಡುತ್ತೇನೆ.
31 ರ ಒಳಗೆ ಎಂಇಎಸ್ ನಿಷೇಧ ಮಾಡಿದ್ರೆ ಬಂದ್ ಕೈಬಿಡಲಾಗುತ್ತದೆ, ಇಲ್ಲದಿದ್ದಲ್ಲಿ ಹೇಳಿದ ದಿನಾಂಕದಂದು ಬಂದ್ ನಡೆದೆ ನಡೆಯುತ್ತದೆ. ನಮಗೆ ನೈತಿಕ ಬೆಂಬಲ ಬೇಡ, ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಅಂಗಡಿ, ಹೊಟೇಲ್ ಗಳನ್ನ ಕ್ಲೋಸ್ ಮಾಡಿ ಬೆಂಬಲ ನೀಡಿದ್ರೆ ಸಾಕು. ಹೋಟೆಲ್ ಮಾಲೀಕರು ಒಂದು ದಿನ ಹೋಟೆಲ್ ಕ್ಲೋಸ್ ಮಾಡಿದ್ರೆ ಯಾವುದೇ ಸಮಸ್ಯೆ ಆಗಲ್ಲ ಎಂದು ಮನವಿ ಮಾಡಿದ್ದಾರೆ.
https://www.youtube.com/watch?v=MPLaWn9q1kM&feature=youtu.be
https://www.youtube.com/watch?v=QFNmQdr9XOw