ನವಗ್ರಹದಲ್ಲಿ ಗುರು ಗ್ರಹ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಮನುಷ್ಯನ ಪ್ರತಿಯೊಂದು ಯಶಸ್ಸಿಗೂ ಗುರು ಗ್ರಹದ ಕೃಪೆ ಬೇಕು. ಗುರು ಗ್ರಹದ ಅನುಗ್ರಹವಿದ್ದಲ್ಲಿ ಸುಖ, ಶಾಂತಿ, ಸಂಪತ್ತು, ವಿವಾಹ, ಸಂತಾನ ಯೋಗ ಎಲ್ಲವೂ ಸಿಗಲಿದೆ. ಜಾತಕದಲ್ಲಿ ಗುರು ಪ್ರಬಲವಾಗಿದ್ದರೆ ಯಶಸ್ಸು ಲಭಿಸುತ್ತದೆ. ದುರ್ಬಲವಾಗಿದ್ದರೆ ಅಪಜಯ, ನೋವು, ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಗುರುವಿನ ಅನುಗ್ರಹ ಪಡೆಯಲು ಬಯಸುವ ವ್ಯಕ್ತಿ ಗುರುವಾರ ಈ ಕೆಲಸಗಳನ್ನು ತಪ್ಪದೆ ಮಾಡಬೇಕಾಗುತ್ತದೆ. ಹಾಗೆ ಮಾಡಿದಲ್ಲಿ ಗುರು ಕೃಪೆ ಸದಾ ಅವರ ಮೇಲಿದ್ದು, ಮನೆಯಲ್ಲಿ ಸುಖ- ಶಾಂತಿ ನೆಲೆಸಿರುತ್ತದೆ.
ಸೂರ್ಯೋದಯಕ್ಕಿಂತ ಮೊದಲು ಶುದ್ಧವಾಗಿ, ವಿಷ್ಣುವನ್ನು ಧ್ಯಾನಿಸಿ, ಆಕಳ ತುಪ್ಪದಲ್ಲಿ ದೀಪ ಹಚ್ಚಬೇಕು.
ಹಣೆಗೆ ಕೇಸರಿ ಅಥವಾ ಅರಿಶಿನದ ತಿಲಕವನ್ನು ಹಚ್ಚಿಕೊಳ್ಳಿ.
ಹಳದಿ ವಸ್ತುಗಳನ್ನು ದಾನ ಮಾಡಿ.
ಸಾಧ್ಯವಾದಲ್ಲಿ ವ್ರತ ಮಾಡಿ.
ಶಿವನಿಗೆ ಹಳದಿ ಬಣ್ಣದ ಸಿಹಿ ತಿಂಡಿಯನ್ನು ಅರ್ಪಿಸಿ.
ಬಾಳೆ ಮರಕ್ಕೆ ಪೂಜೆ ಮಾಡಿ. ಹಳದಿ ಖಾದ್ಯ ಅಥವಾ ಹಳದಿ ಬಣ್ಣದ ಹಣ್ಣನ್ನು ನೈವೇದ್ಯ ಮಾಡಿ.
ಬಾಳೆ ಹಣ್ಣನ್ನು ದಾನ ಮಾಡಿ.
ಹಳದಿ ಬಣ್ಣದ ಹಾರವನ್ನು ವಿಷ್ಣುವಿಗೆ ನೀಡಿ.
ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ.
ಗುರುವಾರ ಉಪ್ಪನ್ನು ತಿನ್ನಬೇಡಿ.
ಓಂ ನಮೋಃ ನಾರಾಯಣಾಯ ಜಪವನ್ನು ಪಠಿಸಿ.