1994ರ ಬ್ಯಾಚ್ನ ಹರಿಯಾಣ ಕೇಡರ್ನ ಐಪಿಎಸ್ ಅಧಿಕಾರಿ ಕಲಾ ರಾಮಚಂದ್ರನ್ ಇಂದಿನಿಂದ ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಗುರುಗ್ರಾಮವು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕಮೀಷನರ್ನ್ನು ಹೊಂದಲಿದೆ.
ಗುರುಗ್ರಾಮ್ ಬಳಿಯ ಭೋಂಡ್ಸಿಯಲ್ಲಿರುವ ಪೊಲೀಸ್ ತರಬೇತಿ ಮತ್ತು ಸಂಶೋಧನಾ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ನಿರ್ಗಮನ ಪೊಲೀಸ್ ಕಮೀಷನರ್ ಕೆ.ಕೆ. ರಾವ್ರಿಂದ ಕಲಾ ರಾಮಚಂದ್ರನ್ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಐಪಿಎಸ್ ಅಧಿಕಾರಿ ಕಲಾ ರಾಮಚಂದ್ರನ್ ಟ್ರಾಫಿಕ್ ನಿರ್ವಹಣೆ, ನಗರದ ನಿವಾಸಿಗಳಿಗೆ ಸುರಕ್ಷತೆ ಹಾಗೂ ಭದ್ರತೆ ಒದಗಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಇಡೀ ನಗರದ ನಿವಾಸಿಗಳಿಗೆ ಸುರಕ್ಷತಾ ಭಾವ ಉಂಟಾಗುವಂತೆ ನಾನು ಕೆಲಸ ಮಾಡುತ್ತೇನೆ ಎಂದು ಕಲಾ ರಾಮಚಂದ್ರನ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುಗ್ರಾಮದಲ್ಲಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಹಾಗೂ ರಸ್ತೆಯ ಸುರಕ್ಷತೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇವೆರೆಡರ ಕಡೆಗೆ ಹೆಚ್ಚು ಗಮನ ನೀಡಲು ನಿರ್ಧರಿಸಿದ್ದೇನೆ. ನಗರದ ಎಲ್ಲಾ ನಿವಾಸಿಗಳಿಗೆ ರಸ್ತೆ ಹಾಗೂ ಸೈಬರ್ ಸುರಕ್ಷತೆಯನ್ನು ಒದಗಿಸಲು ಯತ್ನಿಸುತ್ತೇನೆ ಎಂದು ಹೇಳಿದರು.