ತುರಿಕೆ ಸಮಸ್ಯೆಯಿಂದ ಹೊರಬರುವುದು ಕಷ್ಟದ ಕೆಲಸವೇ. ಅದರಲ್ಲೂ ಗುಪ್ತಾಂಗಗಳ ತುರಿಕೆ ಜೀವ ಹಿಂಡುತ್ತದೆ. ಬಿಗಿಯಾದ ಅಂಡರ್ ವೇರ್ ಹಾಕಿದ್ದರೆ ಅಲ್ಲಿ ಗಾಳಿ ಆಡುವುದಿಲ್ಲ.
ಹಾಗಾಗಿ ಅಲ್ಲಿ ಫಂಗಸ್ ಬೆಳೆಯುತ್ತದೆ. ಬೆವರಿನಲ್ಲಿ ಸಕ್ಕರೆ ಪ್ರಮಾಣ ಇದ್ದು, ಇದು ಫಂಗಸ್ ಗೆ ಒಳ್ಳೆಯ ಆಹಾರ ಆಗುತ್ತದೆ. ಅದಕ್ಕಾಗಿ ದೈಹಿಕ ಶ್ರಮದ ಕೆಲಸ ಅಥವಾ ಜಿಮ್ ಮಾಡಿ ಮನೆಗೆ ಬಂದ ನಂತರ ಸ್ನಾನ ಮಾಡಿ ಗುಪ್ತಾಂಗಗಳನ್ನು ಚೆನ್ನಾಗಿ ಒರೆಸಿ ಒಣಗಿಸಿಕೊಳ್ಳಬೇಕು.
ಸಡಿಲವಾಗಿರುವ ಒಳ ಉಡುಪುಗಳನ್ನು ಬೇಸಿಗೆಯಲ್ಲಿ ಧರಿಸಬೇಕು. ಕಾಟನ್ ಹೊರತು ಬೇರೆ ವಸ್ತ್ರಗಳನ್ನು ಧರಿಸಬಾರದು. ತೇವಾಂಶವನ್ನು ಹೀರಿಕೊಳ್ಳುವ ಪೌಡರ್ ಅನ್ನು ಬಳಸಬಹುದು. ಅಂಡರ್ ವೇರ್ ಅನ್ನು ಸೋಪಿನಿಂದ ತೊಳೆದ ನಂತರ ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಕೆರೆತ ಹೆಚ್ಚಾಗಿದ್ದರೆ ಒಂದು ವಾರಗಳ ಕಾಲ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಹದಿನೈದು ನಿಮಿಷಗಳ ಬಳಿಕ ಸ್ನಾನ ಮಾಡಿ.