ವೃತ್ತಿಯಲ್ಲಿ ಪೇಂಟರ್ ಆಗಿರುವ ಹರಿಯಾಣದ ಫತೇಹಾಬಾದ್ನ ವ್ಯಕ್ತಿಯೊಬ್ಬರಿಗೆ 2.5 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ದಿನವೊಂದಕ್ಕೆ ಕೇವಲ 300 ರೂಪಾಯಿ ಗಳಿಸುವ ಪ್ರೇಮ್ ಕುಮಾರ್ರಿಗೆ ಆರು ತಿಂಗಳ ವಿದ್ಯುತ್ ಬಿಲ್ ಮೊತ್ತವು 2.5 ಲಕ್ಷ ರೂಪಾಯಿಗಳು ಬಂದಿದ್ದು ಶಾಕ್ ಆಗಿದ್ದಾರೆ.
ಇನ್ನೊಂದು ಆಘಾತಕಾರಿ ವಿಚಾರವೆಂದರೆ ಪ್ರೇಮ್ ವಾಸವಿರುವ ಗುಡಿಸಲಿನಲ್ಲಿ ಎರಡು ಫ್ಯಾನ್ಗಳು ಹಾಗೂ ಎರಡು ಬಲ್ಬುಗಳು ಮಾತ್ರ ಇವೆ. ಇಂತಹ ಪರಿಸ್ಥಿತಿಯಲ್ಲಿ ಇಷ್ಟು ದೊಡ್ಡ ಮೊತ್ತದ ಕರೆಂಟ್ ಬಿಲ್ ನೋಡಿ ಪ್ರೇಮ್ ಕುಮಾರ್ ಕುಟುಂಬ ಆಘಾತಕ್ಕೊಳಗಾಗಿದೆ.
ಇಷ್ಟು ದೊಡ್ಡ ಮೊತ್ತದ ಬಿಲ್ ಕಂಡು ಶಾಕ್ ಆದ ಪ್ರೇಮ್ ಕುಮಾರ್ ಕುಟುಂಬವು ವಿದ್ಯುತ್ ಕಚೇರಿಗೆ ಸುತ್ತಾಡುತ್ತಿದೆ. ಆದರೆ ಅಧಿಕಾರಿಗಳು ಇವರಿಗೆ ಯಾವುದೇ ರೀತಿಯ ಸಹಾಯವನ್ನು ಮಾಡುತ್ತಿಲ್ಲ. ಇದರಿಂದ ಬೇಸತ್ತ ಕುಟುಂಬವು ವಿದ್ಯುತ್ ಸಚಿವ ರಂಜೀತ್ ಚೌತಾಲಾರನ್ನು ಸಂಪರ್ಕಿಸಲು ಮುಂದಾಗಿದೆ.
ನಾನು ಪೇಂಟರ್ ಆಗಿ ಕೆಲಸ ಮಾಡುತ್ತೇನೆ ಮತ್ತು ಇಡೀ ದಿನ ಕಷ್ಟಪಟ್ಟು ಕೆಲಸ ಮಾಡಿದ ನಂತರ ದಿನಕ್ಕೆ 300 ರೂ. ಗಳಿಸುತ್ತೇನೆ. ನನ್ನ ಮನೆಯಲ್ಲಿ ಎರಡು ಬಲ್ಬ್‌ಗಳು ಮತ್ತು ಎರಡು ಫ್ಯಾನ್‌ಗಳಿವೆ ಮತ್ತು ನನ್ನ ಕುಟುಂಬವು ರೆಫ್ರಿಜರೇಟರ್ ಅಥವಾ ಕೂಲರ್ ಅನ್ನು ಸಹ ಬಳಸುವುದಿಲ್ಲ. ನಾನು ಸಮಯಕ್ಕೆ ಸರಿಯಾಗಿ ಪಾವತಿಸುವ 400 ರೂ. ವಿದ್ಯುತ್ ಬಿಲ್, ಆದರೆ ಕಳೆದ ಆರು ತಿಂಗಳಿನಿಂದ, ವಿದ್ಯುತ್ ಇಲಾಖೆ ಎರಡು ಮೂರು ಬಿಲ್‌ಗಳನ್ನು ಕಳುಹಿಸಿದೆ ಮತ್ತು ಈಗ ನನಗೆ 2.5 ಲಕ್ಷ ರೂಪಾಯಿ ಕಟ್ಟುವಂತೆ ಹೇಳ್ತಿದ್ದಾರೆ. ಇದರಿಂದ ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಪ್ರೇಮ್ ಕುಮಾರ್ ಹೇಳಿದ್ದಾರೆ.