ನಟಿ ಅದಿತಿ ಪ್ರಭುದೇವ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್ ಒಂದು ಮತ್ತೆ ಹಬ್ಬಿದ್ದು, ಅವರು ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅವರು ಅಪ್ಲೋಡ್ ಮಾಡಿದ್ದ ಫೋಟೋದಿಂದಾಗಿ ಈ ರೀತಿಯ ಗಾಸಿಪ್ ಕೇಳಿ ಬರುತ್ತಿದೆ. ಅವರು ಹಾಕಿರುವ ಫೋಟೋದಲ್ಲಿ ಅದಿತಿ ಕೈಯಲ್ಲಿ ಉಂಗುರವೊಂದನ್ನು ಹಾಕಿದ್ದಾರೆ. ಅಲ್ಲದೇ, ವ್ಯಕ್ತಿಯೊಬ್ಬರು ಅವರೊಂದಿಗೆ ಇದ್ದಾರೆ. ಅವರು ಯಾರು ಎಂಬುವುದನ್ನು ಮಾತ್ರ ಅದಿತಿ ಹೇಳಿಲ್ಲ. ಆದರೆ, ಕನಸಿನಂತೆ ಕನಸೊಂದು ನನಸಾಯಿತು ಎಂದು ಬರೆದುಕೊಂಡಿದ್ದಾರೆ.
BIG BREAKING: ನಾಯಕತ್ವ ಬದಲಾವಣೆ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ: ಬೊಮ್ಮಾಯಿಗೆ ಬಹುಪರಾಕ್
ಸದ್ಯ ಈ ಫೋಟೋಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಹಲವರು ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ. ಹೀಗಾಗಿ ಪಕ್ಕಾ ಅವರಿಗೆ ಎಂಗೇಜ್ ಮೆಂಟ್ ಆಗಿದೆ ಎನ್ನಲಾಗುತ್ತಿದೆ.
ಸದ್ಯದ ಮಾಹಿತಿಯಂತೆ ಅದಿತಿ ದಾವಣಗೆರೆ ಮೂಲದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬ ಸದಸ್ಯರು ಮಾತ್ರ ಈ ಸಂದರ್ಭದಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮ ಡಿ. 26ರಂದು ನಡೆದಿದೆ ಎನ್ನಲಾಗಿದ್ದು, ಯಾವುದೇ ಅಧಿಕೃತ ಮಾಹಿತಿ ಮಾತ್ರ ಹೊರ ಬಿದ್ದಿಲ್ಲ. ಅದಿತಿ ಕೂಡ ದಾವಣಗೆರೆ ಮೂಲದವರು.
https://www.instagram.com/p/CX-9AWhl9nh/?utm_source=ig_web_copy_link