ಗುಜರಾತ್- ಗುಜರಾತ್ ನಲ್ಲಿ ಭಾರೀ ದುರಂತವೊಂದು ಸಂಭವಿಸಿದ್ದು, ಮೊರ್ಬಿ ಪ್ರದೇಶದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕೇಬಲ್ ಸೇತುವೆ ಕುಸಿದು ನೂರಾರು ಮಂದಿ ಮೃತಪಟ್ಟಿದ್ದಾರೆ. ಸೇತುವೆಯ ನವೀಕರಣ ಕಾಮಗಾರಿ ಕೇವಲ ಒಂದು ವಾರದ ಹಿಂದೆ ಮುಕ್ತಾಯಗೊಂಡಿತ್ತು. ಮೂರು ದಿನಗಳ ಹಿಂದೆ ಸೇತುವೆಯನ್ನು ಮತ್ತೊಮ್ಮೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಹೀಗಾಗಿ ನೂರಾರು ಜನರು ಸೇತುವೆಯನ್ನು ವೀಕ್ಷಿಸಲು ಬಂದಿದ್ದಾಗ ಈ ದುರುಂತ ಸಂಭವಿಸಿದೆ.
ಮೋದಿಯ ತವರಿನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿಯವರ ಹಳೆಯ ವಿಡಿಯೋ ಒಂದು ವೈರಲ್ ಆಗ್ತಾ ಇದೆ. ಅವರು ಬಂಗಾಳದಲ್ಲಿ ಮಾಡಿದ್ದ ಭಾಷಣದ ಮಾತುಗಳು ಇದೀಗ ಸೋಷಿಯಲ್ ಮೀಡಿಯಾ ದಲ್ಲಿ ಚರ್ಚೆಗೆ ಬಂದಿದೆ. 2016ರ ಮಾರ್ಚ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು 27 ಜನರು ಸಾವನಪ್ಪಿದ್ದರು. ಆಗ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಇದು ಆಕ್ಟ್ ಆಫ್ ಗಾಡ್ ಎಂದು ಕೆಲವರು ಹೇಳುತ್ತಾರೆ, ದೀದಿ ಇದು ಆಕ್ಟ್ ಆಫ್ ಗಾಡ್ ಅಲ್ಲ ಬದಲಿಗೆ ಆಕ್ಟ್ ಆಫ್ ಫ್ರಾಡ್ ಆಗಿದೆ ಎಂದಿದ್ದರು.
ಜೊತೆಗೆ ದೀದಿ ಆಡಳಿತಕ್ಕೆ ಹಿಡಿದ ಚುಕ್ಕಾಣಿ ಎನ್ನುವ ಮೂಲಕ ಅವರಿಗೆ ತಿವಿಯುವ ಕೆಲಸ ಮಾಡಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದೇ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ. ನೀವು ಯಾವ ರೀತಿ ಆಡಳಿತ ಮಾಡುತ್ತಿದ್ದೀರ. ನಿಮ್ಮ ಕೆಲಸವೂ ಫ್ರಾಡ್ ಕೆಲಸ ತಾನೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ಮೋದಿ ಕಾಲೆಳೆದಿದ್ದಾರೆ.