ಗುಜರಾತ್: ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅನ್ನೋದು ಹೆಚ್ಚಾಗಿದೆ. ತಂದೆ ಶಾಸಕರಾಗಿದ್ದರೆ ಮಕ್ಕಳಿಗೂ ಟಿಕೆಟ್ ಕೊಡಿಸುವಲ್ಲಿ ಸಫಲರಾಗ್ತಾ ಇದ್ದಾರೆ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇರೆ ಬೇರೆ ರಾಜ್ಯಗಳಲ್ಲೂ ಇದೇ ನಡೀತಾ ಇದೆ. ಗುಜರಾತ್ ಚುನಾವಣೆಯಲ್ಲೂ ಇಂಥದ್ದೇ ಪರಿಸ್ಥಿತಿ ಇದೆ.
ಹೌದು, ಒಟ್ಟು 182 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈ ಪೈಕಿ ಕನಿಷ್ಠ ಅಂದರೂ 20 ಕ್ಷೇತ್ರಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಪುತ್ರರು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಲ್ಲಿ 13 ಅಭ್ಯರ್ಥಿಗಳು ಮತ್ತು ಬಿಜೆಪಿಯಿಂದ ಏಳು ಅಭ್ಯರ್ಥಿಗಳು ಈ ರೀತಿ ಕಣಕ್ಕೆ ಇಳಿದಿದ್ದಾರೆ. ಈ ರೀತಿಯ ಕುಟುಂಬ ಅಥವಾ ವಂಶವಾಹಿ ರಾಜಕಾರಣಕ್ಕೆ ಮೋದಿ ಬ್ರೇಕ್ ಹಾಕಬೇಕು ಎಂದು ಹೇಳಿದ್ದರು. ಆದರೆ ಇದೀಗ ಗುಜರಾತ್ ನಲ್ಲೇ ಈ ರೀತಿ ಆಗ್ತಾ ಇದೆ.
ಇನ್ನು ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ಆಗಲಿದ್ದು, ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದ್ದು, ಅಂದು 182 ಕ್ಷೇತ್ರದ ಭವಿಷ್ಯ ಹೊರ ಬೀಳಲಿದೆ. ಈಗಾಗಲೇ ಸರ್ವ ಪಕ್ಷಗಳು ಕೂಡ ಚುನಾವಣಾ ತಂತ್ರ ಮಾಡಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಕಾದು ನೋಡಬೇಕು.