‘ಹಾಸನಾಂಬೆ’ ದರ್ಶನಕ್ಕಾಗಿ ತೆರೆಯಲಾಗಿದ್ದ ದೇಗುಲದ ಬಾಗಿಲನ್ನು ಗುರುವಾರದಂದು ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಬೀಗ ಮುದ್ರೆ ಮಾಡಲಾಗಿದ್ದು, ಇನ್ನು ವರ್ಷದ ಬಳಿಕ ಮತ್ತೆ ಹಾಸನಾಂಬೆಯ ದರ್ಶನವಾಗಲಿದೆ.
15 ದಿನಗಳ ಕಾಲ ನಡೆದ ಹಾಸನಾಂಬೆಯ ದರ್ಶನಕ್ಕಾಗಿ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಗಣ್ಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸಹ ಹಾಸನಾಂಬೆಯ ದರ್ಶನಕ್ಕಾಗಿ ಹಾಸನಕ್ಕೆ ಆಗಮಿಸಿದ್ದು, ಈ ವೇಳೆ ರಸ್ತೆ ಬದಿ ಕುಳಿತಿದ್ದ ಗಿಳಿ ಶಾಸ್ತ್ರಕಾರನ ಬಳಿ ಶಾಸ್ತ್ರ ಕೇಳಿದ್ದಾರೆ.
ರವಿಯವರ ಕೈ ನೋಡಿದ ಆತ, ನಿಮ್ಮ ಹಸ್ತ ರೇಖೆ ಚೆನ್ನಾಗಿದೆ. ಆರೋಗ್ಯ ಹಾಗೂ ಕಾರ್ಯದ ಕುರಿತು ಹೆಚ್ಚು ಜಾಗೃತಿ ವಹಿಸಿ. ದಾನ ಧರ್ಮ ಮಾಡುವ ವೇಳೆ ಅತಿ ಉದಾರತೆ ಬೇಡ ಎಂದು ಹೇಳಿದ್ದಲ್ಲದೆ ತಿಥಿ ಊಟ ಮಾಡಬೇಡಿ ಎಂದು ಎಚ್ಚರಿಸಿದ್ದಾನೆ.