ಜಾರ್ಖಂಡ್ ನ ಪಕುರ್ ಜಿಲ್ಲೆಯಲ್ಲಿ ಪ್ರೇಮಿಯೇ ತನ್ನ ಗೆಳತಿಯನ್ನು ಹತ್ಯೆ ಮಾಡಿದ್ದಾನೆ, ಅದು ಕೂಡ ಕ್ಷುಲ್ಲಕ ಕಾರಣಕ್ಕಾಗಿ. ತಾನು ಉಡುಗೊರೆಯಾಗಿ ಕೊಟ್ಟಿದ್ದ ಸ್ಮಾರ್ಟ್ ಫೋನನ್ನು ಆಕೆ ವಾಪಸ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಕೊಲೆ ಮಾಡಿಬಿಟ್ಟಿದ್ದಾನೆ.
ಭಾನುವಾರ ರಾತ್ರಿ ಯುವತಿ ಆತನ ಜೊತೆಗೆ ಫುಟ್ ಬಾಲ್ ಪಂದ್ಯ ನೋಡಲು ತೆರಳಿದ್ಲು. ಮನೆಗೆ ವಾಪಸ್ಸಾಗಿರಲಿಲ್ಲ, ಮರುದಿನ ಅವಳ ಮೃತದೇಹ ನಿರ್ಜನ ಪ್ರದೇಶವೊಂದರಲ್ಲಿ ಪತ್ತೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಆರೋಪಿ, ಈ ಯುವತಿಯನ್ನು ಪ್ರೀತಿಸ್ತಾ ಇದ್ದ.
ಎಷ್ಟೋ ರಾತ್ರಿಗಳನ್ನು ಯುವತಿಯ ಮನೆಯಲ್ಲೇ ಕಳೆದಿದ್ದ. ಆದ್ರೆ ಆತನ ಮನೆಯವರು ಬೇರೊಬ್ಬಳೊಂದಿಗೆ ಅವನ ಮದುವೆ ನಿಶ್ಚಯಿಸಿದ್ದರು. ಹಾಗಾಗಿ ತಾನು ಗಿಫ್ಟ್ ಕೊಟ್ಟಿದ್ದ ಮೊಬೈಲ್ ಹಿಂದಿರುಗಿಸುವಂತೆ ಆತ ಯುವತಿಯನ್ನು ಕೇಳಿದ್ದ. ಆದ್ರೆ ಆಕೆ ಕೊಟ್ಟಿರಲಿಲ್ಲ. ಇದೇ ವಿಷಯಕ್ಕೆ ಜಗಳ ಮಾಡಿಕೊಂಡು ಇಬ್ಬರೂ ಫುಟ್ಬಾಲ್ ಮ್ಯಾಚ್ ನೋಡಲು ತೆರಳಿದ್ದರು.
ಅಲ್ಲಿಂದ ವಾಪಸ್ ಬರುವಾಗ ಇದೇ ವಿಷಯಕ್ಕೆ ಮತ್ತೆ ಜಗಳವಾಗಿದೆ. ಹರಿತವಾದ ಚಾಕುವಿನಿಂದ ಯುವಕ, ಆಕೆಯ ಕತ್ತು ಸೀಳಿ ನಿರ್ಜನ ಪ್ರದೇಶದಲ್ಲಿ ಎಸೆದು ಫೋನ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಪೊಲೀಸರು ಈಗಾಗ್ಲೇ ಆರೋಪಿಯನ್ನು ಬಂಧಿಸಿದ್ದಾರೆ.