
ಮನೆಯ ಹೂದೋಟದಲ್ಲಿ ಹೂಗಳಿದ್ದರೆ ನೋಡುವುದಕ್ಕೆ ಚೆಂದವಾಗಿರುತ್ತದೆ. ಇನ್ನು ಕೆಲವರು ದೇವರ ಪೂಜೆಗೆಂದು ಒಂದಷ್ಟು ಹೂ ಬಿಡುವ ಗಿಡಗಳನ್ನು ತಂದು ನೆಡುತ್ತಾರೆ. ಅದರಲ್ಲಿ ದಾಸವಾಳವೂ ಒಂದು. ವಿವಿಧ ಬಣ್ಣದ ದಾಸವಾಳದ ಹೂವಿನ ಗಿಡಗಳು ಮಾರುಕಟ್ಟೆಯಲ್ಲಿ ಸಿಗಲಿದೆ. ಹೀಗೆ ತಂದು ನೆಟ್ಟ ದಾಸವಾಳ ಗಿಡದ ತುಂಬಾ ಹೂ ಬಿಡಲು ಈ ಟಿಪ್ಸ್ ಒಮ್ಮೆ ಫಾಲೋ ಮಾಡಿ ನೋಡಿ.
ಈಗಂತೂ ಎಲ್ಲರೂ ಮನೆಯ ಟೆರೆಸ್ ಮೇಲೆ ಚಿಕ್ಕ ಹೂದೋಟ ಮಾಡಿಕೊಳ್ಳುತ್ತಿದ್ದಾರೆ. ಪಾಟ್ ನಲ್ಲಿ ತಮಗೆ ಬೇಕಿರುವ ತರಕಾರಿ, ಹಣ್ಣು, ಹೂಗಳನ್ನು ಬೆಳೆದುಕೊಳ್ಳುತ್ತಿದ್ದಾರೆ. ದಾಸವಾಳ ಗಿಡವನ್ನು ಕೂಡ ಈ ಪಾಟ್ ಗಳಲ್ಲಿ ಸುಲಭವಾಗಿ ಬೆಳೆಸಬಹುದು. ಮಣ್ಣು, ನೀರಿನಷ್ಟೇ ಮುಖ್ಯವಾಗಿ ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ದಾಸವಾಳ ಗಿಡವನ್ನು ತುಂಬಾ ಚೆನ್ನಾಗಿ ಬೆಳೆಸಬಹುದು. ಹಾಗೇ ಗಿಡದ ತುಂಬಾ ಹೂ ಬಿಡುವಂತೆ ಮಾಡಬಹುದು.
ಒಂದು ಗ್ಲಾಸ್ ನೀರಿಗೆ 2 ಚಮಚದಷ್ಟು ಕಾಫಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ನೀರನ್ನು ದಾಸವಾಳದ ಗಿಡದ ಬುಡಕ್ಕೆ ಹಾಕಿ. ಇದರಿಂದ ದಾಸವಾಳದ ಗಿಡದಲ್ಲಿ ಹೂ ಚೆನ್ನಾಗಿ ಆಗುತ್ತದೆ.