ಮನೆಯ ಅಂದ ಹೆಚ್ಚಾಗಲು ಅಂಗಳದಲ್ಲಿ ಹೂವಿನ ತೋಟವಿರಬೇಕು. ಅದಕ್ಕಾಗಿ ಕೆಲವರು ಮನೆಯ ಮುಂದೆ ಸುಂದರವಾದ ಗಾರ್ಡನ್ ಮಾಡುತ್ತಾರೆ. ಆದರೆ ಗಿಡಗಳು ಒಣಗದಂತೆ ಪದೇ ಪದೇ ನೀರು ಹಾಕಬೇಕಾಗುತ್ತದೆ. ಅಂತವರಿಗೆ ಇಲ್ಲಿದೆ ಒಂದು ಸೂಪರ್ ಆದ ಟಿಪ್ಸ್.
ಕೆಲವರು ಮನೆಯ ಅಂಗಳದಲ್ಲಿ ನೆಲದ ಮೇಲೆ ಗಿಡಗಳನ್ನು ನೆಟ್ಟರೆ ಇನ್ನೂ ಕೆಲವರು ಗಿಡಗಳನ್ನು ಪಾಟ್ ನಲ್ಲಿ ನೆಡುತ್ತಾರೆ. ಆದರೆ ಈ ಪಾಟ್ ಗೆ ಯಾವಾಗಲೂ ನೀರು ಹಾಕುತ್ತಿರಬೇಕು.
ಇಲ್ಲವಾದರೆ ಮಣ್ಣು ಡ್ರೈ ಆಗಿ ಗಿಡ ಸತ್ತು ಹೋಗುವ ಸಾಧ್ಯತೆ ಇದೆ. ಅದಕ್ಕಾಗಿ ಒಂದು ನೀರಿನ ಬಾಟಲ್ ನ್ನು ತೆಗೆದುಕೊಂಡು ಅದರ ಮುಚ್ಚಳದ ಮೇಲೆ ಕೆಲವು ತೂತುಗಳನ್ನು ಮಾಡಿ ಹಾಗೇ ಬಾಟಲ್ ನ ಬುಡದಲ್ಲಿ ಗಾಳಿ ಹೋಗಲು ಕೆಲವು ತೂತುಗಳನ್ನು ಮಾಡಿ.
ಬಳಿಕ ಬಾಟಲಿಗೆ ನೀರು ತುಂಬಿಸಿ ಪಾಟ್ ನಲ್ಲಿರುವ ಗಿಡದ ಬುಡದಲ್ಲಿ ಬಾಟಲ್ ಅನ್ನು ಅರ್ಧ ಮೇಲಗಡೆ ಕಾಣುವಂತೆ ಹೂತು ಹಾಕಬೇಕು. ಆಗ ಗಿಡದ ಬುಡಕ್ಕೆ ಎಷ್ಟು ಬೇಕು ಅಷ್ಟು ನೀರು ಪೂರೈಕೆಯಾಗುತ್ತದೆ. ಇದರಿಂದ ಗಿಡ ಚೆನ್ನಾಗಿ ಬೆಳೆಯುತ್ತದೆ.