ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕಿಟಕಿ ಹಾಗೂ ಬಾಗಿಲಿಗೂ ಮಹತ್ವದ ಸ್ಥಾನವಿದೆ. ಬಾಗಿಲು ಹಾಗೂ ಕಿಟಕಿ ಸಂಖ್ಯೆ ಸಮ ಪ್ರಮಾಣದಲ್ಲಿದ್ದರೆ ಸುಖ-ಸಮೃದ್ಧಿ ಮನೆಯಲ್ಲಿ ನೆಲೆಸಿರುತ್ತದೆ. ತಪ್ಪು ದಿಕ್ಕು ಹಾಗೂ ಸಂಖ್ಯೆ ಸಮಸ್ಯೆಯನ್ನು ಆಹ್ವಾನಿಸುತ್ತದೆ. ಸಾಮಾನ್ಯವಾಗಿ ಕಿಟಕಿ ಗಾಳಿ ಹಾಗೂ ಬೆಳಕು ಬರಲು ಮಾತ್ರ ಸೀಮಿತ ಮಾಡಿಕೊಂಡಿದ್ದೇವೆ. ಆದ್ರೆ ಕಿಟಕಿ ಸಂತೋಷ-ಸಮೃದ್ಧಿಯನ್ನು ತಂದುಕೊಡುತ್ತದೆ.
ವಾಸ್ತುಶಾಸ್ತ್ರದಲ್ಲಿ ಕಿಟಕಿ ಬಗ್ಗೆ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಮನೆ ನಿರ್ಮಾಣದ ವೇಳೆ ಕಿಟಕಿ ಬಗ್ಗೆ ಗಮನ ನೀಡಬೇಕು. ಕಿಟಕಿ ಸಂಖ್ಯೆ 2, 4, 6, 8, 10 ಇರಬೇಕು. ಆದ್ರೆ ವಿಷಮ ಸಂಖ್ಯೆ ಕಿಟಕಿ ಅಶುಭಕ್ಕೆ ಕಾರಣವಾಗುತ್ತದೆ.
ಕಿಟಕಿ ದಿಕ್ಕು ಕೂಡ ಮಹತ್ವದ ಪಾತ್ರವಹಿಸುತ್ತದೆ. ಕಿಟಕಿ ಮನೆಯ ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿರಬೇಕು. ದಕ್ಷಿಣ ದಿಕ್ಕು ಯಮನ ದಿಕ್ಕು ಎಂದು ಪರಿಗಣಿಸಲಾಗಿದೆ. ಹಾಗಾಗಿ ದಕ್ಷಿಣ ದಿಕ್ಕಿನಲ್ಲಿ ಎಂದೂ ಕಿಟಕಿ ಇರಬಾರದು.
ಮನೆಯ ಮುಖ್ಯ ದ್ವಾರದ ಅಕ್ಕಪಕ್ಕ ಕಿಟಕಿ ಇರುವಂತೆ ಆದಷ್ಟು ಪ್ರಯತ್ನಿಸಿ. ಇದ್ರಿಂದ ಸಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಿರುತ್ತದೆ.
ಕಿಟಕಿ ಅಶುಭಕ್ಕೆ ಕಾರಣವಾಗಬಾರದು ಎಂದಿದ್ದರೆ ಸದಾ ಕಿಟಕಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕಿಟಕಿ ಮುಚ್ಚುವ ವೇಳೆ ಶಬ್ಧ ಬರದಂತೆ ನೋಡಿಕೊಳ್ಳಿ. ಕಿಟಕಿ ಯಾವಾಗ್ಲೂ ಒಳ ಭಾಗದಲ್ಲಿ ತೆರೆಯುವಂತಿರಲಿ. ಕಿಟಕಿ ಗಾತ್ರ ದೊಡ್ಡದಿದ್ದಷ್ಟು ಹೆಚ್ಚು ಶುಭವೆಂದು ಪರಿಗಣಿಸಲಾಗಿದೆ.
ಪೂರ್ವ ದಿಕ್ಕು ಭಗವಂತ ಸೂರ್ಯನ ದಿಕ್ಕು. ಹಾಗಾಗಿ ಈ ಭಾಗದಲ್ಲಿ ಹೆಚ್ಚೆಚ್ಚು ಕಿಟಕಿ ಇರುವಂತೆ ನೋಡಿಕೊಳ್ಳಿ.