ಶ್ರೀಲಂಕಾದ ಜಾಫ್ನಾದಲ್ಲಿರುವ ಪೆಡ್ರೋದಲ್ಲಿ ನಡೆದ ಗಾಳಿಪಟ ಹಾರಿಸುವ ಆಟದಲ್ಲಿ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಆಟದಲ್ಲಿ ಭಾಗಿಯಾಗಿದ್ದ ಓರ್ವ ಸ್ಪರ್ಧಿಯು ಹಗ್ಗವನ್ನು ಹಿಡಿದು ಬೌನ್ಸ್ ಆಗಲು ಯತ್ನಿಸಿದ ವೇಳೆಯಲ್ಲಿ ಬರೋಬ್ಬರಿ 30 ಅಡಿ ಎತ್ತರಕ್ಕೆ ಹಾರಿದ್ದಾರೆ. ಪವಾಡ ಸದೃಶ ಎಂಬಂತೆ ಆ ವ್ಯಕ್ತಿಯು ಅಷ್ಟು ಎತ್ತರಕ್ಕೆ ಹಾರಿದ್ದರೂ ಸಹ ಸುರಕ್ಷಿತವಾಗಿ ಕೆಳಗಿಳಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಥಾಯ್ ಪೊಂಗಲ್‌ನಂದು ನಡೆಯುವ ಗಾಳಿಪಟ ಹಾರಾಟವು ಹೆಚ್ಚಿನ ಜನಸಮೂಹದಿಂದ ಇಷ್ಟವಾಗುತ್ತದೆ. ಅತ್ಯಂತ ಸೃಜನಶೀಲ ಗಾಳಿಪಟಗಳನ್ನು ರಚಿಸಲಾಗುತ್ತದೆ. ಇದನ್ನು ಸ್ನೇಹಿತರು ಮತ್ತು ಕುಟುಂಬದ ಗುಂಪುಗಳಿಂದ ಹಾರಿಸಲಾಗುತ್ತದೆ.
ಥಾಯ್ ಪೊಂಗಲ್ ಹಬ್ಬದ ಪ್ರಯುಕ್ತ ಈ ಗಾಳಿಪಟ ಹಾರಾಟ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಸ್ನೇಹಿತರು ಹಾಗೂ ಕುಟುಂಬದವರು ಒಂದಾಗಿ ಇಲ್ಲಿ ಆಕರ್ಷಕ ಗಾಳಿಪಟಗಳನ್ನು ಹಾರಿಸುತ್ತಾರೆ.
ಇದು ಈ ಭಾಗದ ಜನತೆಯ ಪಾಲಿಗೆ ಅತ್ಯಂತ ಪ್ರಸಿದ್ಧ ಹಬ್ಬವಾಗಿದೆ. ಸ್ಪರ್ಧೆಗೂ ಮುನ್ನ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ತಯಾರಾಗುತ್ತಾರೆ. ಇದು ಅತ್ಯಂತ ಮನರಂಜನೆ ನೀಡುವ ಕಾರ್ಯಕ್ರಮವಾಗಿದೆ.
ಆದರೂ ಸಹ ಪಾಯಿಂಟ್ ಪೆಡ್ರೋದಲ್ಲಿ ನಡೆದ ಘಟನೆಯೊಂದರಲ್ಲಿ ಓರ್ವ ಸ್ಪರ್ಧಿಯು ತನ್ನ ಜೀವವನ್ನು ಕಾಪಾಡಿಕೊಳ್ಳುವ ಸಲುವಾಗಿ ಹಗ್ಗದ ಮೇಲೆ ಜೋತಾಡಿದ್ದು ಮನರಂಜನೆಯ ಆಟವು ದೊಡ್ಡ ದುರಂತ ಎಂಬಂತೆ ಭಾಸವಾಗಿದೆ.
ಆರು ಜನರ ಗುಂಪು ಸೆಣಬಿನ ಹಗ್ಗಕ್ಕೆ ಕಟ್ಟಿದ ದೊಡ್ಡ ಗಾಳಿಪಟವನ್ನು ಎತ್ತಲು ಆರಂಭಿಸಿತ್ತು. ಹಗ್ಗವನ್ನು ಹಿಡಿದು ಪುಟಿದೇಳಲು ಯತ್ನಿಸಿದ ವ್ಯಕ್ತಿಯು ನೆಲದಿಂದ ಕನಿಷ್ಟ 30 ಅಡಿ ಎತ್ತರಕ್ಕೆ ಹಾರಿದ್ದಾರೆ. ಇದನ್ನು ನೋಡಿದ ಸ್ನೇಹಿತರು ಜೋರಾಗಿ ಕಿರುಚಿದ್ದಾರೆ. ಆದರೆ ಆತ ಸುಮಾರು 1ನಿಮಿಷಗಳ ಕಾಲ ಹಗ್ಗದಲ್ಲೇ ಜೋತಾಡಿದ್ದು ಬಳಿಕ ಕ್ರಮೇಣವಾಗಿ ಕೆಳಗೆ ಇಳಿದಿದ್ದಾರೆ.