ಆಟಗಾರನೊಬ್ಬ ಗಾಲ್ಫ್ ಆಟವಾಡುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂಥಾ ವಿಶೇಷತೆ ಏನು ಅಂತಾ ಕೇಳ್ತೀರಾ…? ಆಟಗಾರ ಗಾಲ್ಫ್ ಕ್ರೀಡೆಯಲ್ಲಿ ಮುಳುಗಿದ್ದರೆ, ಆತನ ಹಿಂದೆ ಮೊಸಳೆಯೊಂದು ಸದ್ದಿಲ್ಲದೆ ದಾಪುಗಲಿಡುತ್ತಿದೆ.
ಹೌದು ಅಮೆರಿಕಾದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ, ಗಾಲ್ಫ್ ಆಟಗಾರ ಶಾಟ್ ಹೊಡೆಯಲು ಸಿದ್ಧವಾಗಿದ್ದರೆ, ಹಿಂದಿನಿಂದ ಮೊಸಳೆ ಆತನತ್ತ ಸಮೀಪಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಹಾಗಂತ ಮೊಸಳೆ ತನ್ನ ಹತ್ತಿರ ಬರುತ್ತಿದೆ ಎಂದು ಗೊತ್ತಾದರೂ ಕೂಡ ಗಾಲ್ಫ್ ಆಟಗಾರ ವಿಚಲಿತನಾಗಲಿಲ್ಲ. ಆತ ಅದನ್ನು ನಿರ್ಲಕ್ಷಿಸಿ ಶಾಟ್ ತೆಗೆದುಕೊಳ್ಳುವುದನ್ನು ಮುಂದುವರಿಸುತ್ತಾನೆ. ಅಲ್ಲಿದ್ದವರೊಬ್ಬರು ಮೊಸಳೆ ಆಟಕ್ಕೆ ಸೇರಲು ಬಯಸುತ್ತದೆ ಎಂದು ತಮಾಷೆ ಮಾಡಿದರು.
ವಿಡಿಯೋವನ್ನು ಫೇಸ್‌ಬುಕ್ ಬಳಕೆದಾರ ಮೆಲಿಸ್ಸಾ ವಾಲ್ಷ್ ಎಂಬುವವರು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಎಲ್ಲಾ ಮೊಸಳೆಗಳು ಉಪದ್ರಕಾರಿಯಲ್ಲ ಎಂಬುದನ್ನು ವಿಡಿಯೋ ಸಾಬೀತುಪಡಿಸಿದೆ ಅಂತಾ ಕೆಲವರು ಪ್ರತಿಕ್ರಿಯಿಸಿದರು.
ಫ್ಲೋರಿಡಾದಲ್ಲಿ ಮೊಸಳೆಗಳು ಸಾಮಾನ್ಯವಾಗಿದೆ. ಇತ್ತೀಚೆಗೆ ಛಾಯಾಗ್ರಾಹಕ ಮತ್ತು ಸರೀಸೃಪಗಳ ನಡುವಿನ ಮುಖಾಮುಖಿಯನ್ನು ತೋರಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಈ ಮೊಸಳೆಯು ಕ್ಯಾಮರಾಮ್ಯಾನ್ ಥೋರ್ಬ್‌ಜಾರ್ನ್‌ಸೆನ್ ನತ್ತ ದಾಳಿ ಮಾಡಲು ಮುಂದಾಗಿತ್ತು.