ಮನೆಯ ಅಂಗಳದಲ್ಲಿ ಗಾರ್ಡನ್ ಇದ್ದರೆ ಮನೆಯ ಅಂದ ಹೆಚ್ಚುತ್ತದೆ. ಆದ ಕಾರಣ ಬಗೆ ಬಗೆಯ ಹೂವಿನ ಗಿಡಗಳನ್ನು ಮನೆಯಂಗಳದಲ್ಲಿ ನೆಟ್ಟು ಪೋಷಣೆ ಮಾಡಿ. ಅದಕ್ಕಾಗಿ ಕೆಲವೊಂದು ಟಿಪ್ಸ್ ಅನ್ನು ಫಾಲೋ ಮಾಡಿ.
ಗಿಡಗಳು ಬೇಗ ಬೇರು ಬಿಡಲು ರೂಟಿಂಗ್ ಹಾರ್ಮೋನ್ ಪೌಡರ್ ನ್ನು ಬಳಸುತ್ತೇವೆ. ಅದರ ಬದಲು ಅಲೋವೆರಾವನ್ನು ರೂಟಿಂಗ್ ಹಾರ್ಮೋನ್ ಆಗಿ ಬಳಸಬಹುದು. ಅಲೋವೆರಾ ವನ್ನು ಚಿಕ್ಕ ಚಿಕ್ಕ ಪೀಸ್ ಮಾಡಿಕೊಂಡು ಆ ಪೀಸ್ ಗಳಿಗೆ ಹೂವಿನ ಗಿಡದ ಕಟಿಂಗ್ ನ್ನು ಚುಚ್ಚಿ ಮಣ್ಣಿನಲ್ಲಿ ನೆಡಬೇಕು. ಇದರಿಂದ ಬೇಗನೆ ಬೇರುಗಳು ಬಿಟ್ಟುಕೊಂಡು ಗಿಡ ಬೇಗ ಚಿಗುರೊಡೆಯುತ್ತದೆ. ಮತ್ತು ಗಿಡದ ಬೇರುಗಳಿಗೆ ಇನ್ ಫೆಕ್ಷನ್ ಆಗುವುದನ್ನು ಅಲೋವೆರಾ ತಡೆಯುತ್ತದೆ.
ಹಾಗೇ ನಿಮ್ಮ ಮನೆಯಲ್ಲಿರುವ ಹಳೆಯ ಮಾತ್ರೆಗಳನ್ನು ಎಸೆಯುವ ಬದಲು ಅದನ್ನು ಪುಡಿ ಮಾಡಿ ಅಥವಾ ನೀರಿನಲ್ಲಿ ಮಿಶ್ರಣ ಮಾಡಿ ಗಿಡಕ್ಕೆ ಹಾಕಿ. ಇದರಿಂದ ಗಿಡಗಳಿಗೆ ಶಕ್ತಿ ಬರುತ್ತದೆ ಮತ್ತು ಹುಳ ಹಿಡಿಯದಂತೆ ತಡೆಯಬಹುದು. ಹಾಗೇ ಗಿಡದ ಪಾಟ್ ನಲ್ಲಿರುವ ಮಣ್ಣು ಬಿಸಿಲಿಗೆ ಬೇಗ ಡ್ರೈ ಆಗುತ್ತದೆ. ಹೀಗೆ ಆಗದಂತೆ ತಡೆಯಲು ತೆಂಗಿನ ನಾರನ್ನು ಗಿಡದ ಬುಡದಲ್ಲಿ ಇಟ್ಟು ನೀರು ಹಾಕಿ. ಇದರಿಂದ ಮಣ್ಣು ತೇವಾಂಶದಿಂದ ಕೂಡಿರುತ್ತದೆ.