alex Certify ಗಾರ್ಡನ್ ನಲ್ಲಿ ಬೆಳೆಯಿರಿ ಸ್ಟ್ರಿಂಗ್‌ ಆನಿಯನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾರ್ಡನ್ ನಲ್ಲಿ ಬೆಳೆಯಿರಿ ಸ್ಟ್ರಿಂಗ್‌ ಆನಿಯನ್‌

ಸ್ಟ್ರಿಂಗ್‌ ಆನಿಯನ್‌ ಗಿಡವು ಉತ್ತಮ ರುಚಿ ಹಾಗೂ ಪೌಷ್ಟಿಕಾಂಶ ಹೊಂದಿರುವ ತರಕಾರಿಯಾಗಿದ್ದು, ಕಿಚನ್‌ ಗಾರ್ಡನ್‌ನಲ್ಲಿ ಸುಲಭವಾಗಿ ಬೆಳೆಯಬಹುದು.

* ಸ್ಟ್ರಿಂಗ್‌ ಆನಿಯನ್‌ ಬೆಳೆಯಲು ಹೆಚ್ಚು ಆರೈಕೆ ಬೇಕಿಲ್ಲ. ಆದರೆ ಸ್ವಲ್ಪ ಸೂರ್ಯನ ಬೆಳಕು ಬೇಕು.

* ಮನೆಯ ಒಳಾಂಗಣದಲ್ಲಿ ಕಿಟಕಿ ಬಳಿ ಸಣ್ಣ ಕುಂಡಗಳಲ್ಲೂ ಜಿಗುಟಿಲ್ಲದ ಉತ್ತಮ ಮಣ್ಣಿನಲ್ಲಿ ಬೆಳೆಯಬಹುದು.

* ಈ ಗಿಡವನ್ನು ಬೀಜ ಹಾಗೂ ಗೆಡ್ಡೆಗಳ ಮೂಲಕ ಬೆಳೆಯಬಹುದು. ಗೆಡ್ಡೆಗಳಿಂದ ಸ್ವಲ್ಪ ಬೇಗ ಹಾಗೂ ಬೀಜಗಳಿಂದ ಸ್ವಲ್ಪ ನಿಧಾನದ ಬೆಳೆ ಪಡೆಯಬಹುದು.

* ಕಿಚನ್‌ ಗಾರ್ಡನ್‌ನಲ್ಲಿ ಬೆಳೆಯುವಾಗ ಹಗುರವಾದ ಮಣ್ಣಿನಲ್ಲಿ 1/2 ಅಡಿ ಆಳದಲ್ಲಿ ಗೆಡ್ಡೆಗಳನ್ನು ನಾಟಿ ಮಾಡಬೇಕು.

* ಬೀಜಗಳ ಮೂಲಕ ಬೆಳೆಯುವಾಗ ಹಗುರವಾದ ಮಣ್ಣಿನಲ್ಲಿ 1 ಇಂಚು ಆಳದಲ್ಲಿ ಬೀಜಗಳನ್ನು ಬಿತ್ತನೆ ಮಾಡಿ ಮಣ್ಣನ್ನು ಮುಚ್ಚಬೇಕು.

* ಮನೆಯಲ್ಲಿ ಅಡುಗೆಗೆ ತಂದ ಸ್ಟ್ರಿಂಗ್‌ ಆನಿಯನ್‌ ನ ಹಸಿರು ಭಾಗವನ್ನು ಕತ್ತರಿಸಿ ಉಪಯೋಗಿಸಿಕೊಂಡು ಗೆಡ್ಡೆಗಳನ್ನು ಹೊಸ ಗಿಡ ಬೆಳೆಯಲು ಸಂಗ್ರಹಿಸಬಹುದು.

* ಸಸಿಗಳು ಸಣ್ಣದಿರುವಾಗ ನೀರನ್ನು ಹನಿ ಹನಿಯಾಗಿ ಹಾಕಬೇಕು. ಗಿಡಕ್ಕೆ ಕ್ರಿಮಿಕೀಟ ಹತ್ತದಂತೆ ನೋಡಿಕೊಳ್ಳಬೇಕು.

* ಗಿಡ 6 ಇಂಚು ಬೆಳೆದಾಗ ಮಣ್ಣಿನಲ್ಲಿ ಹೆಚ್ಚು ತೇವಾಂಶವಿಲ್ಲದಂತೆ ಗಮನಹರಿಸಬೇಕು. ಹೆಚ್ಚು ದಿನ ಮಣ್ಣಿನಲ್ಲೇ ಬಿಡದಂತೆ ಸರಿಯಾದ ಸಮಯಕ್ಕೆ ಕಟಾವು ಮಾಡಬೇಕು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...