alex Certify ಗಾಯಾಳು ಹರ್ಜೋತ್​ ಸಿಂಗ್ ರನ್ನು ಯುದ್ಧ ಪೀಡಿತ ಸ್ಥಳದಿಂದ​ ಏರ್ ​ಲಿಫ್ಟ್ ಮಾಡಿಸಿದ್ದೇ ರಣರೋಚಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಾಳು ಹರ್ಜೋತ್​ ಸಿಂಗ್ ರನ್ನು ಯುದ್ಧ ಪೀಡಿತ ಸ್ಥಳದಿಂದ​ ಏರ್ ​ಲಿಫ್ಟ್ ಮಾಡಿಸಿದ್ದೇ ರಣರೋಚಕ….!

ಕೀವ್​ನಲ್ಲಿ ಬುಲೆಟ್​​ ದಾಳಿಗೊಳಗಾಗಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್​ ಸಿಂಗ್​​ರನ್ನು ಉಕ್ರೇನ್​ನ ರಾಜಧಾನಿಯಿಂದ ರಸ್ತೆ ಮಾರ್ಗವಾಗಿ 700 ಕಿಲೋಮೀಟರ್​ ದೂರದಲ್ಲಿರುವ ಗಡಿಗೆ ಕರೆತರಲಾಯಿತು. ಇಲ್ಲಿಂದ ಹರ್ಜೋತ್​ ಸಿಂಗ್​ ವಿಮಾನವನ್ನು ಹತ್ತಿ ಸ್ವದೇಶಕ್ಕೆ ಬಂದಿಳಿದಿದ್ದಾರೆ.

31 ವರ್ಷದ ಹರ್ಜೋತ್​ ಸಿಂಗ್​ ನಿನ್ನೆ ಸಂಜೆ ಸುಮಾರಿಗೆ ದೆಹಲಿ ಬಳಿಯ ಹಿಂಡನ್​​ ಏರ್​ಫೋರ್ಸ್​ ಸ್ಟೇಷನ್​ಗೆ ಭಾರತೀಯ ವಾಯುಪಡೆಗೆ ಸೇರಿದ ಸಿ 17 ವಿಮಾನದಲ್ಲಿ ಬಂದಿಳಿದರು. ಇದು ಪೊಲೆಂಡ್​ನಿಂದ ಇತರೆ ಭಾರತೀಯರನ್ನೂ ಹೊತ್ತು ತಂದಿದೆ.

ಹರ್ಜೋತ್​ ಸಿಂಗ್​ರನ್ನು ಕೀವ್​ನಿಂದ ಸ್ಥಳಾಂತರಿಸುವ ವೇಳೆಯಲ್ಲಿ ಎದುರಾದ ಎಲ್ಲಾ ಸವಾಲುಗಳನ್ನು ಭಾರತೀಯ ರಾಯಭಾರ ಕಚೇರಿಯು ಸರಣಿ ಟ್ವೀಟ್​ಗಳ ಮೂಲಕ ವಿವರಿಸಿದೆ.

ಹರ್ಜೋತ್​ರನ್ನು ಮನೆಗೆ ಕರೆತರಲಾಗುತ್ತಿದೆ. ಕೀವ್​ನಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿ ಹರ್ಜೋತ್​ ಸಿಂಗ್ ರ​​ನ್ನು ಯುದ್ಧ ವಲಯಗಳಲ್ಲಿ 700 ಕಿಮೀಗಿಂತಲೂ ಅಧಿಕ ದೂರ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು. ಅವರು ಐ ಎಫ್​​ ಸಿ 17 ಎಸಿ ವಿಮಾನದ ಮೂಲಕ ಪೊಲೆಂಡ್​ನಿಂದ ಭಾರತಕ್ಕೆ ತೆರಳಿದ್ದಾರೆ ಎಂದು ರಾಯಭಾರ ಕಚೇರಿ ಟ್ವೀಟ್​ ಮಾಡಿದೆ.

ಮತ್ತೊಂದು ಪೋಸ್ಟ್​ನಲ್ಲಿ ರಾಯಭಾರ ಕಚೇರಿಯು ಸಿಂಗ್​​ರನ್ನು ಕೀವ್​ನಿಂದ ಬೋಡೋಮಿಯರ್ಜ್​ ಗಡಿಗೆ ಸಾಗಿಸಿದ ಚಾಲಕನನ್ನು ಶ್ಲಾಘಿಸಿದೆ.

ಶೆಲ್​ ದಾಳಿ, ಇಂಧನ ಕೊರತೆ ಅಲ್ಲಲ್ಲಿ ರಸ್ತೆ ತಡೆಗಳು, ಟ್ರಾಫಿಕ್​ ಜಾಮ್​ಗಳೆಂಬ ಸಾಕಷ್ಟು ನಿರ್ಬಂಧಗಳ ನಡುವೆಯೂ ಕೀವ್​ನಿಂದ ಬೊಡೊಮಿಯೆರ್ಜ್​ ಗಡಿಗೆ ಬರೋಬ್ಬರಿ 700 ಕಿಲೋಮೀಟರ್​​ ದೂರವನ್ನು ಯಶಸ್ವಿಯಾಗಿ ಕ್ರಮಿಸಿದ್ದಾರೆ. ಹರ್ಜೋತ್​ರನ್ನು ಯಶಸ್ವಿಯಾಗಿ ವರ್ಗಾಯಿಸಿದ ಭಾರತೀಯ ರಾಯಭಾರ ಕಚೇರಿಯ ಚಾಲಕನಿಗೆ ಧನ್ಯವಾದಗಳು ಎಂದು ಮತ್ತೊಂದು ಟ್ವೀಟ್​ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...