alex Certify ಗಾಯಕ್ಕೆ ಟಿ.ಟಿ. ಇಂಜಕ್ಷನ್ ಮಾಡಿಸಬೇಕೆ ? ಇಲ್ಲಿದೆ ಡಾ. ರಾಜು ನೀಡಿರುವ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯಕ್ಕೆ ಟಿ.ಟಿ. ಇಂಜಕ್ಷನ್ ಮಾಡಿಸಬೇಕೆ ? ಇಲ್ಲಿದೆ ಡಾ. ರಾಜು ನೀಡಿರುವ ಮಹತ್ವದ ಮಾಹಿತಿ

ಬೆಂಗಳೂರು: ಸಾಮಾನ್ಯವಾಗಿ ಕಬ್ಬಿಣ ತಾಗಿ ಸಣ್ಣ ಗಾಯವಾದರೆ, ಇಲ್ಲವೇ ನಾಯಿ ಅಥವಾ ಬೇರೆ ಯಾವುದೇ ಪ್ರಾಣಿ ಕಚ್ಚಿದರೆ ನಂಜು ಆಗದಂತೆ ಟಿ.ಟಿ. ಇಂಜಕ್ಷನ್ ತೆಗೆದುಕೊಳ್ಳುತ್ತೇವೆ. ಈ ಟಿ.ಟಿ ಇಂಜಕ್ಷನ್ ಎಂದರೆ ಏನು? ಯಾವ ಕಾರಣಕ್ಕಾಗಿ ತೆಗೆದುಕೊಳ್ಳುತ್ತೇವೆ ? ಟಿ.ಟಿ.ಇಂಜಕ್ಷನ್ ತೆಗೆದುಕೊಳ್ಳುವ ಅಗತ್ಯವಾದರೂ ಏನು ? ಅದರಿಂದ ಆಗುವ ಅನುಕೂಲ, ಅನಾನುಕುಲವೇನು ? ಎಂಬ ಬಗ್ಗೆ ಡಾ.ರಾಜು ತಮ್ಮ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ.

ಟಿ.ಟಿ. ಇಂಜಕ್ಷನ್ ಕೂಡ ಒಂದು ಲಸಿಕೆ ಅಥವಾ ವ್ಯಾಕ್ಸಿನ್, ಟೆಟನಸ್ ಎಂಬ ಕಾಯಿಲೆ ಅಥವಾ ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವ ಒಂದು ಲಸಿಕೆ ಎಂದು ಮಾಹಿತಿ ನೀಡಿದ್ದಾರೆ.

ಈ ಬ್ಯಾಕ್ಟಿರಿಯಾ ಮಣ್ಣಿನಲ್ಲಿ, ತುಕ್ಕು ಹಿಡಿದ ಕಬ್ಬಿಣದಲ್ಲಿ ಇರುತ್ತದೆ. ಹಾಗಾದರೆ ಯಾವ ಯಾವ ಸಂದರ್ಭಗಳಲ್ಲಿ ಟಿ.ಟಿ ಇಂಜಕ್ಷನ್ ತೆಗೆದುಕೊಳ್ಳಬೇಕು ? ನಮಗೆ ಟಿ.ಟಿ ಇಂಜಕ್ಷನ್ ಯಾವೆಲ್ಲ ರೂಪದಲ್ಲಿ ಕೊಡಲಾಗುತ್ತದೆ ಎಂಬ ಮಹತ್ವದ ಮಾಹಿತಿಯನ್ನು ಡಾ. ರಾಜು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಟಿ.ಟಿ. ಇಂಜಕ್ಷನ್ ಕುರಿತು ಮಹತ್ವದ ಮಾಹಿತಿಯನ್ನು ನೀವೂ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...