ಚಾಕಲೇಟ್ ಚಿಪ್ಸ್ ಅಥವಾ ಸಣ್ಣ ಸಣ್ಣ ಬೀಜಗಳನ್ನು ಹಾಕಿ ಮಾಡಿರೋ ಬಿಸ್ಕೆಟ್ ಗಳನ್ನು ನೀವು ತಿಂದಿರಬಹುದು. ಅದರ ಟೇಸ್ಟ್ ಕೂಡ ನಿಮಗೆ ಇಷ್ಟವಾಗಿರಬಹುದು.
ಜೀರಿಗೆ, ಕಡಲೆಕಾಯಿ ಅಥವಾ ಎಳ್ಳಿನಿಂದ ಮಾಡಿದ ಬಿಸ್ಕೆಟ್ ಕೂಡ ನೋಡಿರ್ತೀರಾ. ಇಲ್ಲೊಬ್ಬ ಮಹಿಳೆ ಇರುವೆಗಳೇ ಮುತ್ತಿಕೊಂಡಿದ್ದ ಬಿಸ್ಕೆಟ್ ನೋಡಿ, ಚಾಕಲೇಟ್ ಚಿಪ್ಸ್ ಎಂದುಕೊಂಡು ಅದನ್ನು ತಿಂದು ಮೋಸ ಹೋಗಿದ್ದಾಳೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೊಟ್ಟಣ ತೆರೆದು ಬಿಸ್ಕೆಟ್ ನೋಡಿದಾಗ ಅದರ ಮೇಲೆ ಎಳ್ಳು, ಜೀರಿಗೆ ಅಥವಾ ಚಾಕಲೇಟ್ ಚಿಪ್ಸ್ ಇದೆ ಎಂದು ಆಕೆಗೆ ಅನಿಸಿತು. ಆದ್ರೆ ಟೇಸ್ಟ್ ತುಂಬಾ ಕೆಟ್ಟದಾಗಿದ್ದಿದ್ರಿಂದ ನಂತರ ಸರಿಯಾಗಿ ಪರಿಶೀಲಿಸಿದ್ದಾಳೆ. ಆಗಲೇ ಆಕೆಗೆ ಗೊತ್ತಾಗಿದ್ದು ಬಿಸ್ಕೆಟ್ ತುಂಬಾ ಇರುವೆಗಳೇ ಆವರಿಸಿದ್ದವು ಅನ್ನೋದು. ಇದನ್ನು ನೋಡಿದ ಮಹಿಳೆ ಕಿರುಚಲು ಆರಂಭಿಸಿದ್ದಾಳೆ.
ಬ್ರೆನ್ನಾ (@brennaj77) ಆಕಸ್ಮಿಕವಾಗಿ ಇರುವೆಗಳಿಂದ ತುಂಬಿದ ಬಿಸ್ಕೆಟ್ ಅನ್ನು ತಿಂದ ತನ್ನ ಅನುಭವದ ಬಗ್ಗೆ ಹೇಳಲು ಟಿಕ್‌ಟಾಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಎರಡು ಬಿಸ್ಕೆಟ್ ಗಳನ್ನು ತಿಂದಿರೋ ಬ್ರೆನ್ನಾ ತನಗಾದ ವಿಲಕ್ಷಣ ಅನುಭವದ ಬಗ್ಗೆಯೂ ಹೇಳಿಕೊಂಡಿದ್ದಾಳೆ. ಸುಮಾರು 20 ಮಿಲಿಯನ್ ಗಿಂತಲೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.