
ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಬಿಂಬಿಸುವ ʼಹರ್ ಘರ್ ಮೆ ತಿರಂಗಾʼ ಕ್ಯಾಂಪೇನ್ ಅನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ. ಗುಜರಾತ್‌ನ ಗಾಂಧಿನಗರದಲ್ಲಿ ಖುದ್ದು ಪ್ರಧಾನು ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್, ತ್ರಿವರ್ಣ ಧ್ವಜ ಹಿಡಿದು ಕಾರ್ಯಕ್ರಮಕ್ಕೆ ಸಾಥ್ ಕೊಟ್ಟಿದ್ದಾರೆ.
ಗಾಂಧಿನಗರದ ರಾಯ್ಸನ್ ಎಂಬ ಗ್ರಾಮದಲ್ಲಿ ಪ್ರಧಾನಿ ಮೋದಿ ಅವರ ಸಹೋದರ ಪಂಕಜ್ ಮೋದಿ ಅವರೊಂದಿಗೆ ಹೀರಾಬೆನ್ ವಾಸಿಸುತ್ತಾರೆ. ಕಳೆದ ಜೂನ್ 18ರಂದು ಅವರು 100ನೇ ಜನ್ಮದಿನ ಆಚರಿಸಿಕೊಂಡಿದ್ದರು. ಆಗಸ್ಟ್ 13 ರಿಂದ 15ರವರೆಗೆ ಎಲ್ಲರೂ ತ್ರಿವರ್ಣ ಧ್ವಜವನ್ನು ತಂದು ಮನೆಯಲ್ಲಿ ಹಾರಿಸುವಂತೆ ಸೂಚಿಸಲಾಗಿತ್ತು.
ಈ ಮೂಲಕ ಸ್ವಾತಂತ್ರ್ಯದ ಇತಿಹಾಸ, ಸ್ವತಂತ್ರ ಹೋರಾಟಗಾರರ ಸಾಧನೆ ಮತ್ತು ನಮ್ಮ ಸಂಸ್ಕೃತಿಯನ್ನು ನೆನೆಯುವಂತೆ ಕರೆ ನೀಡಲಾಗಿತ್ತು. ಭಾರತದ ಪ್ರತಿ ಮೂಲೆ ಮೂಲೆಯಲ್ಲೂ ತಿರಂಗಾ ಕಂಗೊಳಿಸಬೇಕೆಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದರಂತೆ ಮಕ್ಕಳಿಗೆಲ್ಲ ತಿರಂಗಾ ವಿತರಿಸಿದ ಮೋದಿ ತಾಯಿ ಹೀರಾಬೆನ್, ತಾವು ಕೂಡ ಧ್ವಜವನ್ನು ಹಾರಿಸಿದ್ದಾರೆ.