ಗಾಂಜಾ ಸೇವನೆ ಕುರಿತಂತೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಸಣ್ಣ ಪ್ರಮಾಣದ ಗಾಂಜಾವನ್ನು ಹೊಂದಿದ್ದಕ್ಕಾಗಿ ಶಿಕ್ಷೆಗೊಳಗಾಗಿರುವ ಎಲ್ಲಾ ಅಮೆರಿಕನ್ನರನ್ನು ಬಿಡೆನ್ ಕ್ಷಮಿಸಿದ್ದಾರೆ. ಕೇವಲ ಗಾಂಜಾ ಸೇವನೆ ಮಾಡಿದ್ದಕ್ಕಾಗಿ ಅವರನ್ನು ಜೈಲಿಗೆ ಹಾಕುವುದು ಸರಿಯಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲ, ಗಾಂಜಾ ಹೊಂದಿದ್ದಕ್ಕಾಗಿ ಜೈಲು ಸೇರಿರುವ ಸುಮಾರು 6,500 ಖೈದಿಗಳನ್ನು ಬಿಡುಗಡೆ ಮಾಡಲು ಜೋ ಬಿಡೆನ್ ತೀರ್ಮಾನಿಸಿದ್ದಾರೆ. ಗಾಂಜಾ ಬಳಕೆಯನ್ನು ಅಪರಾಧೀಕರಿಸುವುದು ಮತ್ತು ತಪ್ಪಿತಸ್ಥರ ಶಿಕ್ಷೆಯನ್ನು ಮನ್ನಾ ಮಾಡುವುದಾಗಿ ಬಿಡೆನ್ ಭರವಸೆ ನೀಡಿದ್ದಾರೆ.
ಗಾಂಜಾ ಹೊಂದಿದ್ದಕ್ಕಾಗಿ ಜನರನ್ನು ಜೈಲಿಗೆ ಕಳುಹಿಸುವುದರಿಂದ ಅನೇಕ ಜೀವಗಳನ್ನು ಬಲಿ ಪಡೆದಂತಾಗಿದೆ. ನಿಷೇಧಿಸದ ನಡವಳಿಕೆಗಾಗಿ ಜನರನ್ನು ಜೈಲಿಗೆ ಹಾಕಲಾಗಿದೆ ಎಂದವರು ಹೇಳಿದ್ರು. ಬಿಳಿಯರಲ್ಲದವರು ಗಾಂಜಾಕ್ಕಾಗಿ ಜೈಲಿಗೆ ಹೋಗುವ ಸಾಧ್ಯತೆ ಹೆಚ್ಚು ಎಂದು ಉಲ್ಲೇಖಿಸಿದ್ದಾರೆ.
ಗಾಂಜಾ ಕ್ಷಮಾದಾನ ನೀಡಲು ಎಲ್ಲಾ ರಾಜ್ಯ ಗವರ್ನರ್‌ಗಳಿಗೆ ಕರೆ ನೀಡುವುದಾಗಿ ತಿಳಿಸಿದ್ದಾರೆ. ಫೆಡರಲ್ ಕಾನೂನಿನಡಿಯಲ್ಲಿ ಗಾಂಜಾವನ್ನು ಹೇಗೆ ವರ್ಗೀಕರಿಸಲಾಗಿದೆ ಎಂಬುದನ್ನು ಪರಿಶೀಲಿಸಲು ಬಿಡೆನ್ ನ್ಯಾಯಾಂಗ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದರು. ವಾಷಿಂಗ್ಟನ್ ಡಿಸಿ ಸೇರಿದಂತೆ ಅಮೆರಿಕದ 19 ರಾಜ್ಯಗಳಲ್ಲಿ ಗಾಂಜಾ ಕಾನೂನುಬದ್ಧವಾಗಿದೆ.