ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿದ್ದ ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ ದಿ ರೈಸ್ ಚಿತ್ರ ಬಿಡುಗಡೆಯಾದ ಕೇವಲ 6 ದಿನಗಳಲ್ಲಿಯೇ ದಾಖಲೆ ಬರೆದಿದೆ.
ಈಗ ಬಾಕ್ಸ್ ಆಫೀಸ್ ನಲ್ಲಿ ಈ ಜೋಡಿ ಅಭಿನಯಿಸಿರುವ ಚಿತ್ರದ್ದೇ ಸದ್ದು ಎನ್ನುವಂತಾಗಿದೆ. ಈ ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ 200 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ, ಕಡಿಮೆ ದಿನಗಳಲ್ಲಿ ಹೆಚ್ಚು ಹಣ ಗಳಿಸಿದ ಚಿತ್ರ ಎಂಬ ದಾಖಲೆ ಬರೆದಿದೆ.
ಅಲ್ಲದೇ, ಈ ಚಿತ್ರವು ಬಿಡುಗಡೆಯಾಗಿದ್ದ ಮೂರು ದಿನಗಳಲ್ಲಿ 173 ಕೋಟಿ ರೂಪಾಯಿಗೂ ಅಧಿಕ ಹಣ ಸಂಪಾದಿಸಿತ್ತು. ಆದರೆ, ಆಂಧ್ರ ಪ್ರದೇಶದಲ್ಲಿನ ನಿಯಮಗಳು ಗಲ್ಲಾ ಪೆಟ್ಟಿಗೆಯಲ್ಲಿ ಇನ್ನೂ ಹೆಚ್ಚಿನ ಹಣ ಹರಿದು ಬರುವುದನ್ನು ತಡೆದಿದೆ. ಆಂಧ್ರದಲ್ಲಿ ಕಟ್ಟುನಿಟ್ಟಾದ ಟಿಕೆಟ್ ದರವನ್ನು ಅಲ್ಲಿನ ಸರ್ಕಾರ ಘೋಷಿಸಿದ್ದರಿಂದಾಗಿ ಆಂಧ್ರದಲ್ಲಿ ಈ ಚಿತ್ರವು ನಿರೀಕ್ಷೆಯಷ್ಟು ಹಣ ಗಳಿಸಿಲ್ಲ.
ಡಿ. 27 ರಂದು ವೇತನ ಸಹಿತ ರಜೆ ಘೋಷಣೆ: ಚುನಾವಣೆ ವ್ಯಾಪ್ತಿಯ ನೌಕರರಿಗೆ ಅನ್ವಯ
ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿಯ ಮಧ್ಯೆಯೇ ಈ ಚಿತ್ರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಗಳಿಸಿರುವುದಕ್ಕೆ ಸಿನಿರಂಗ ಆಶ್ಚರ್ಯ ವ್ಯಕ್ತಪಡಿಸುತ್ತಿದೆ. ಅಲ್ಲದೇ, ಈ ವಾರ ಕೆಲವು ಸ್ಟಾರ್ ನಟರು ಹಾಗೂ ಭಾರೀ ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದರಿಂದಾಗಿ ಮುಂದಿನ ದಿನಗಳಲ್ಲಿ ಪುಷ್ಪ ಚಿತ್ರದ ಗಳಿಕೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಆದರೂ ಅಲ್ಲು ಅರ್ಜುನ್ ಸೇರಿದಂತೆ ಪುಷ್ಪ ಚಿತ್ರ ತಂಡ ಇನ್ನೂ ಈ ಚಿತ್ರ ನೋಡಿ ಯಶಸ್ವಿಗೊಳಿಸಬೇಕೆಂದು ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದಾರೆ. ಈ ವಾರ ಭಾರತೀಯ ಕ್ರಿಕೆಟ್ ತಂಡ ಮೊದಲ ವಿಶ್ವಕಪ್ ಗೆದ್ದಿದ್ದ ಸಂದರ್ಭದಲ್ಲಿನ ಸನ್ನಿವೇಶವನ್ನು ಹೊಂದಿರುವ 83 ಚಿತ್ರ ಸೇರಿದಂತೆ ಕೆಲವು ಚಿತ್ರಗಳು ಬಿಡುಗಡೆಯಾಗಲು ಸಿದ್ಧವಾಗಿವೆ.