alex Certify ಗರ್ಲ್‌ ಫ್ರೆಂಡ್ ಬಳಿ ಮಾತಾಡಿದ್ದಕ್ಕೆ‌ ಚೂರಿಯಿಂದ ಇರಿದ ವಿದ್ಯಾರ್ಥಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್‌ ಫ್ರೆಂಡ್ ಬಳಿ ಮಾತಾಡಿದ್ದಕ್ಕೆ‌ ಚೂರಿಯಿಂದ ಇರಿದ ವಿದ್ಯಾರ್ಥಿ….!

12 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯ ಸಹಪಾಠಿಯನ್ನು ಚಾಕುವಿನಿಂದ ಇರಿದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಮಂಡಲದಲ್ಲಿ ನಡೆದಿದೆ.

ಆರೋಪಿ ವಿದ್ಯಾರ್ಥಿಯ ಗರ್ಲ್ ಫ್ರೆಂಡ್ ಮತ್ತು ಇರಿತಕ್ಕೆ ಒಳಗಾಗಿರುವ ದುರ್ಗಾ ಪ್ರಸಾದ್ ಇಬ್ಬರೂ ಕಾಲೇಜಿನಲ್ಲಿ ಸಹಪಾಠಿಗಳು. ಇವರಿಬ್ಬರೂ ಮಾತನಾಡುತ್ತಿರುವುದನ್ನು ಗಮನಿಸಿದ ಆರೋಪಿಗೆ ಸಿಟ್ಟು ನೆತ್ತಿಗೇರಿದೆ.

ನಿನ್ನ ಬಳಿ ಮಾತನಾಡುವುದು ಇದೆ ಎಂದು ದುರ್ಗಾ ಪ್ರಸಾದ್ ಗೆ ಕರೆ ಮಾಡಿ ತನ್ನ ಬಳಿ ಕರೆಯಿಸಿಕೊಂಡ ಆರೋಪಿ ಏಕಾಏಕಿ ಆತನ ಹೊಟ್ಟೆಗೆ ಇರಿದಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ದುರ್ಗಾಪ್ರಸಾದ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಹತ್ಯೆ ಪ್ರಯತ್ನದ ದೂರನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...