ಗರ್ಭಿಣಿ ಹೊಟ್ಟೆಯಲ್ಲಿ ಬರೋಬ್ಬರಿ ಐದು ಕೆಜಿ ತೂಕದ ಗಡ್ಡೆ ಕಂಡುಬಂದಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಅದನ್ನು ಹೊರತೆಗೆದಿದ್ದಾರೆ.
ಬೀದರ್ ನ ವಿಜಯ ಆಸ್ಪತ್ರೆ ವೈದ್ಯರು ಈ ಯಶಸ್ವಿ ಚಿಕಿತ್ಸೆ ನಡೆಸಿದ್ದು, ಹೈದರಾಬಾದ್ ನ 20 ವರ್ಷದ ಭುವನೇಶ್ವರಿ ಬಸವರಾಜ ಎಂಬ ಮಹಿಳೆ ಹೊಟ್ಟೆಯಿಂದ ಈ ಗಡ್ಡೆಯನ್ನು ತೆಗೆಯಲಾಗಿದೆ.
ಸ್ತ್ರೀರೋಗ ತಜ್ಞೆ ಡಾ. ವಿಜಯ ಮತ್ತು ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸಕ ಡಾ. ವಿಜಯ ಕುಮಾರ್ ಮತ್ತವರ ತಂಡ ಸತತ ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಿಣಿ ಮಹಿಳೆ ಹೊಟ್ಟೆಯಿಂದ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.