alex Certify ಗರ್ಭಿಣಿ ಸಿಬ್ಬಂದಿಗಳ ಕುರಿತ SBI ನಿಯಮಕ್ಕೆ ಆಕ್ಷೇಪ…! ಮಹಿಳಾ ಆಯೋಗದಿಂದ ನೋಟಿಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಸಿಬ್ಬಂದಿಗಳ ಕುರಿತ SBI ನಿಯಮಕ್ಕೆ ಆಕ್ಷೇಪ…! ಮಹಿಳಾ ಆಯೋಗದಿಂದ ನೋಟಿಸ್​

ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸುವ ಹಾಗೂ ಹೆರಿಗೆಯಾದ ನಾಲ್ಕು ತಿಂಗಳ ಒಳಗಾಗಿ ಸೇವೆಗೆ ಹಾಜರಾಗಲು ಅನುಮತಿ ನೀಡುವ ಎಸ್.​ಬಿ.ಐ. ಹೊಸ ನಿಯಮಗಳನ್ನು ಹಿಂಪಡೆಯುವಂತೆ ದೆಹಲಿ ಮಹಿಳಾ ಆಯೋಗವು ಇಂದು ಎಸ್.​ಬಿ.ಐ.ಗೆ ನೋಟಿಸ್​ ನೀಡಿದೆ.

ಭಾರತದ ಪ್ರತಿಷ್ಠಿತ ಬ್ಯಾಂಕ್​ ಆದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಮೂರು ತಿಂಗಳು ಮೇಲ್ಪಟ್ಟ ಗರ್ಭಿಣಿಯರನ್ನು ಸೇವೆಗೆ ಸೇರದಂತೆ ತಡೆಯುವ ಮಾರ್ಗಸೂಚಿಯನ್ನು ಹೊರಡಿಸಿದೆ. ಅಲ್ಲದೇ ಇಂತವರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಿದೆ. ಇದು ಲಿಂಗ ತಾರತಮ್ಯ ಹಾಗೂ ಕಾನೂನು ಬಾಹಿರ ವಿಚಾರವಾಗಿದೆ. ಈ ಕಾನೂನು ಬಾಹಿರ ಮಾರ್ಗಸೂಚಿಯನ್ನು ಹಿಂಪಡೆಯುವಂತೆ ನಾವು ಎಸ್.​ಬಿ.ಐ.ಗೆ ನೋಟಿಸ್​ ನೀಡಿದ್ದೇವೆ ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್​​ ಟ್ವೀಟ್​ ಮಾಡಿದ್ದಾರೆ.

ಎಸ್​.ಬಿ.ಐ.ಗೆ ನೀಡಲಾದ ನೋಟಿಸ್​ನಲ್ಲಿ ದೆಹಲಿ ಮಹಿಳಾ ಆಯೋಗವು ಹೊಸ ಮಾರ್ಗಸೂಚಿಯ ನಕಲು ಪ್ರತಿ ಹಾಗೂ ಇದಕ್ಕೂ ಮೊದಲು ಜಾರಿಗೆ ತರಲಾದ ಇದೇ ರೀತಿಯ ನಿಯಮಗಳ ಪ್ರತಿಯನ್ನು ನೀಡುವಂತೆ ಕೋರಿದೆ.

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಈ ಕ್ರಮವು ಅಖಿಲ ಭಾರತ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ನೌಕರರ ಸಂಘ ಸೇರಿದಂತೆ ಹಲವು ವಲಯಗಳಲ್ಲಿ ಟೀಕೆಗೆ ಗುರಿಯಾಗಿದೆ.

— Swati Maliwal (@SwatiJaiHind) January 29, 2022

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...