alex Certify ಗರ್ಭಿಣಿ ಪತ್ನಿ, ಮಗನನ್ನು ಜೀವಂತವಾಗಿ ಸುಟ್ಟ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿ ಪತ್ನಿ, ಮಗನನ್ನು ಜೀವಂತವಾಗಿ ಸುಟ್ಟ ಪತಿ

ಪಾಪಿ ಪತಿಯೊಬ್ಬ ಮಡದಿ ಹಾಗೂ ಮಗುವನ್ನೇ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಆಶಿಶ್ ಎಂಬ ವ್ಯಕ್ತಿಯೇ ಹೆಂಡತಿ ಹಾಗೂ ಮಗುವನ್ನು ಸಜೀವವಾಗಿ ಸುಟ್ಟು ಹಾಕಿದ್ದ ಆರೋಪಿ ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ರೈಲ್ವೆ ಇಲಾಖೆಯಲ್ಲಿ ಡಿ ಗ್ರೂಪ್ ಕೆಲಸಕ್ಕೆ ಸೇರಿಕೊಳ್ಳಲು ಮುಂದಾಗಿದ್ದ. ಈ ವ್ಯಕ್ತಿಗೆ ಒಂದು ಲಕ್ಷ ರೂಪಾಯಿ ಲಂಚ ನೀಡಿದರೆ ಆ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬ ಆಸೆ ತೋರಿಸಿದ್ದ ಎನ್ನಲಾಗಿದೆ. ಹೀಗಾಗಿ ಪತ್ನಿಗೆ ತವರು ಮನೆಗೆ ಹೋಗಿ ಹಣ ತರುವಂತೆ ಒತ್ತಾಯ ಮಾಡಿದ್ದಾನೆ.

ತವರು ಮನೆಯವರ ಹತ್ತಿರವೂ ಅಷ್ಟೊಂದು ದೊಡ್ಡ ಮೊತ್ತದ ಹಣ ಇಲ್ಲ. ಅವರು ಬಡವರಾಗಿದ್ದರಿಂದಾಗಿ ಹಣ ನೀಡಲು ಆಗುವುದಿಲ್ಲ ಎಂದು ಪತ್ನಿ ಹೇಳಿದ್ದಾರೆ.

ಆದರೂ ಆಶಿಶ್ ಮಾತ್ರ ಹಣ ತರುವಂತೆ ಒತ್ತಾಯ ಮಾಡುತ್ತಿದ್ದ. ಈ ವಿಷಯವಾಗಿಯೇ ಇಬ್ಬರ ಮಧ್ಯೆ ಕಳೆದ ಹಲವು ದಿನಗಳಿಂದಲೂ ಜಗಳ ನಡೆಯುತ್ತಿತ್ತು. ಲಂಚ ನೀಡದಿದ್ದರೆ ಕೆಲಸ ಸಿಗುವುದಿಲ್ಲ, ಹೀಗಾಗಿ ನೀನು ಹಣ ತರಲೇಬೇಕು ಎಂದು ಪೀಡಿಸಿದ್ದಾನೆ.

ಈ ಜಗಳ ವಿಕೋಪಕ್ಕೆ ತೆರಳುತ್ತಿದ್ದಂತೆ ಪಾಪಿ ಆಶಿಶ್, ಸಿಟ್ಟಿನಲ್ಲಿ ಪತ್ನಿ ಹಾಗೂ ಮಗನ ಕಣ್ಣಿಗೆ ಬಟ್ಟೆ ಕಟ್ಟಿ, ನಂತರ ಅವರನ್ನು ಹಾಸಿಗೆಗೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ಹೀಗಾಗಿ ಇಬ್ಬರೂ ಒದ್ದಾಡಿ ಒದ್ದಾಡಿ ಸಾವನ್ನಪ್ಪಿದ್ದಾರೆ.

ಪತ್ನಿ ಗರ್ಭಿಣಿಯಾಗಿದ್ದಳು ಎಂದು ತಿಳಿದು ಬಂದಿದ್ದು, ಇತನ ಕೃತ್ಯಕ್ಕೆ ಅವನ ಸಹೋದರಿಯೂ ಸಾಥ್ ನೀಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...