ಗರ್ಭಿಣಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ವೈದ್ಯರ ಸಲಹೆ ನಂತ್ರ ಮೂರು ತಿಂಗಳು ಪೂರ್ಣಗೊಂಡ ಮೇಲೆ 7 ತಿಂಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಹುದು. ಗರ್ಭಿಣಿ ಪತ್ನಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ಮೊದಲು ಪತಿ ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕು.
ಶಾರೀರಿಕ ಸಂಬಂಧ ಬೆಳೆಸುವ ವೇಳೆ ರಕ್ತಸ್ರಾವವಾದ್ರೆ ಎಚ್ಚರ ವಹಿಸಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಪತಿಗೆ ಯಾವುದೇ ಲೈಂಗಿಕ ಖಾಯಿಲೆ ಅಥವಾ ಸೋಂಕಿದ್ದರೆ ಶಾರೀರಿಕ ಸಂಬಂಧ ಬೆಳೆಸದೆ ದೂರವಿರುವುದು ಒಳ್ಳೆಯದು.
ಶಾರೀರಿಕ ಸಂಬಂಧ ಬೆಳೆಸುವ ವೇಳೆ ಮಹಿಳೆ ಹೊಟ್ಟೆ ಮೇಲೆ ಭಾರ ಬೀಳದಂತೆ ನೋಡಿಕೊಳ್ಳಿ. ಮಹಿಳೆ ಅಸಹಜತೆ ಅನುಭವಿಸಿದ್ರೆ, ನೋವು ಕಂಡು ಬಂದಲ್ಲಿ ಸಂಬಂಧ ಬೆಳೆಸಬೇಡಿ.
ಸಂಬಂಧ ಬೆಳೆಸುವ ವೇಳೆ ವೇಗದ ಬಗ್ಗೆಯೂ ಗಮನ ನೀಡಬೇಕು. ಸಂಗಾತಿ ಹಾಕುವ ಒತ್ತಡ ಗರ್ಭಪಾತಕ್ಕೆ ಕಾರಣವಾಗುವ ಸಾಧ್ಯತೆಯಿದೆ.