
ಇದು ಅತ್ಯಂತ ವಿಚಿತ್ರ ಹಾಗೂ ತಮಾಷೆಯಾಗಿರೋ ಘಟನೆ. ತಾನು ತಾಯಿಯಾಗ್ತಿದ್ದೇನೆ ಅನ್ನೋದು ಅರಿವಿಗೇ ಬಾರದೆ ನಟಿಯೊಬ್ಬರು ಮೂರು ಸಿನೆಮಾ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಸಂದರ್ಶನವೊಂದರಲ್ಲಿ ರೋಚಕ ಸಂಗತಿಯನ್ನು ಬಂಗಾಳಿ ನಟಿ ಸುಭಾಶ್ರೀ ಗಂಗೂಲಿ ಬಹಿರಂಗಪಡಿಸಿದ್ದಾರೆ. ಸುಭಾಶ್ರೀಗೆ ಮೊದಲ ಮೂರು ತಿಂಗಳು ತಾನು ಗರ್ಭಿಣಿ ಎಂದು ತಿಳಿದಿರಲಿಲ್ಲ. ಆರಾಮವಾಗಿ ಆಕೆ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದರು, ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರು.
ತನ್ನೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆ ಅನ್ನೋದು ಆಕೆಯ ಅರಿವಿಗೇ ಬಂದಿರಲಿಲ್ಲ. ಸುಭಾಶ್ರೀ ಈಗ ಗಂಡು ಮಗುವಿನ ತಾಯಿ. ಇದೊಂದು ಆಕ್ಸಿಡೆಂಟಲ್ ಪ್ರೆಗ್ನೆನ್ಸಿ ಎನ್ನುತ್ತಾರೆ ಆಕೆ. ಸಂದರ್ಶನದಲ್ಲಿ ಸುಭಾಶ್ರೀ ಗಂಗೂಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಮುಕ್ತವಾಗಿ ಹೇಳಿದ್ದಾರೆ. ಸುಭಾಶ್ರೀ ಅವರು ತಮ್ಮ ಗರ್ಭಾವಸ್ಥೆಯ ಆರಂಭಿಕ ತಿಂಗಳುಗಳಲ್ಲಿ, ಸತತ ಮೂರು ಚಿತ್ರಗಳಿಗೆ ಚಿತ್ರೀಕರಣ ಮಾಡಿದ್ದರಂತೆ.
ಚಿತ್ರವೊಂದರ ಶೂಟಿಂಗ್ ವೇಳೆ ಫೆಬ್ರವರಿ 14 ರಂದು ಸುಭಾಶ್ರೀ ಪ್ರೆಗ್ನೆನ್ಸಿ ಟೆಸ್ಟ್ ಮಾಡಿದ್ದರು, ಅದರಲ್ಲಿ ಪಾಸಿಟಿವ್ ರಿಸಲ್ಟ್ ಬಂದಿತ್ತು. ಅದಾಗ್ಲೇ ಸುಭಾಶ್ರೀ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಸುಭಾಶ್ರೀ ಗಂಗೂಲಿ, ನಿರ್ದೇಶಕ ರಾಜ್ ಚಕ್ರವರ್ತಿ ಅವರನ್ನು 2018 ರಲ್ಲಿ ವಿವಾಹವಾದರು. 2020ರ ಸಪ್ಟೆಂಬರ್ನಲ್ಲಿ ಅವರಿಗೆ ಗಂಡು ಮಗು ಜನಿಸಿದೆ. ಮಗನಿಗೆ ಯುವನ್ ಎಂದು ಅವರು ಹೆಸರಿಟ್ಟಿದ್ದಾರೆ.