ಕೂದಲು ಉದುರೋದು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಅನೇಕರಿಗೆ ಕೂದಲು ಉದುರಿದ ಎರಡ್ಮೂರು ತಿಂಗಳ ಬಳಿಕ ಹೊಸ ಕೂದಲು ಬಂದು ಬಿಡುತ್ತೆ. ಆದರೆ ಬಾಣಂತಿಯರಿಗೆ ಕೂದಲು ಉದುರುವಿಕೆ ಸಮಸ್ಯೆ ಆರಂಭವಾದ್ರೆ ಮಾತ್ರ ಹೊಸ ಕೂದಲು ಬರೋದು ಸ್ವಲ್ಪ ಕಷ್ಟವೇ.
ಗರ್ಭಿಣಿಯಾಗಿ ಮೂರನೇ ತಿಂಗಳಿನಿಂದ ಮಗು ಹುಟ್ಟಿದ ಕೆಲ ತಿಂಗಳುಗಳವರೆಗೂ ಈ ಸಮಸ್ಯೆ ಇರುತ್ತದೆ. ಹಾರ್ಮೋನ್ಗಳ ಏರುಪೇರಿನಿಂದಾಗಿ ಕೂದಲು ಉದುರವಿಕೆ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರ ವಿಚಾರದಲ್ಲಿ ಇದಕ್ಕೆ ಬೇರೆಯೇ ಕಾರಣವಿರುತ್ತದೆ. ಅದರ ಬಗ್ಗೆ ತಿಳಿದುಕೊಳ್ಳೋಣ.
ಪೋಷಕಾಂಶಗಳ ಕೊರತೆ : ಗರ್ಭಿಣಿಯಾದಾಗ ಎಷ್ಟು ಪೋಷಕಾಂಶಯುಕ್ತ ಆಹಾರ ಸೇವಿಸಿದ್ರೂ ಕಡಿಮೆನೇ. ಈ ಪೋಷಕಾಂಶದ ಕೊರತೆ ಉಂಟಾಯ್ತು ಅಂದರೆ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳೋಕೆ ಆರಂಭವಾಗುತ್ತದೆ. ಕಬ್ಬಿಣಾಂಶ, ಜಿಂಕ್ ಹಾಗೂ ಫಾಲಿಕ್ ಆಸಿಡ್ನ ಕೊರತೆ ಕೂದಲು ಉದುರುವಿಕೆಗೆ ಮುಖ್ಯ ಕಾರಣವಾಗಿದೆ.
ಥೈರಾಯ್ಡ್ ಸಮಸ್ಯೆ : ಕೂದಲಿನ ಆರೋಗ್ಯದ ವಿಚಾರದಲ್ಲಿ ಥೈರಾಯ್ಡ್ ಗ್ರಂಥಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವರಿಗೆ ಗರ್ಭಿಣಿಯಾದಾಗ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ತದೆ. ಹೀಗಾಗಿ ಕೂದಲು ಉದುರುವಿಕೆ ಆರಂಭವಾಗುತ್ತದೆ.
ವಂಶಪಾರಪಂರ್ಯ ಸಮಸ್ಯೆ : ನಿಮ್ಮ ತಾಯಿ, ಅಜ್ಜಿ ಹೀಗೆ ಯಾರಾದರೂ ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಕೂದಲು ಉದುರುವಿಕೆಯಿಂದ ಬಳಲಿದ್ದರೆ. ನಿಮಗೂ ಕೂಡ ಈ ಸಮಸ್ಯೆ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಇದೆ.
ಔಷಧಿಗಳು : ಗರ್ಭಿಣಿಯಾಗಿದ್ದಾಗ ನೀವು ಸಾಕಷ್ಟು ಔಷಧಿಗಳನ್ನ ಸೇವಿಸುತ್ತಿರಾ. ಇದರಲ್ಲಿರುವ ರಾಸಾಯನಿಕಗಳಿಂದ ನಿಮಗೆ ಕೂದಲು ಉದುರುವ ಸಾಧ್ಯತೆ ಇದೆ.
ಈ ಸಮಸ್ಯೆಗಳಿಂದ ಪಾರಾಗೋಕೆ 15ರಿಂದ 20 ನಿಮಿಷ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ತಲೆಯ ಬುಡಕ್ಕೆ ಆಲೋವೆರಾ ರಸವನ್ನ ಹಚ್ಚಿ. ಇಲ್ಲವಾದಲ್ಲಿ ಒಂದು ಪಾತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಆಲಿವ್ ಎಣ್ಣೆ ಹಾಗೂ ಕೊಬ್ಬರಿ ಎಣ್ಣೆಯನ್ನ ಮಿಕ್ಸ್ ಮಾಡಿ. ಇದು ಬಿಸಿಯಾಗುತ್ತಿದ್ದಂತೆ ಇದಕ್ಕೆ ನೆಲ್ಲಿಕಾಯಿ ಪುಡಿಯನ್ನ ಹಾಕಿ. ಈ ಎಣ್ಣೆ ಕಂದು ಬಣಕ್ಕೆ ತಿರುಗುವವರೆಗೂ ಬಿಸಿ ಮಾಡಿ. ಇದು ತಣ್ಣಗಾದ ಬಳಿಕ ತಲೆಗೆ ಹಚ್ಚಿಕೊಳ್ಳಿ. ಈ ರೀತಿ ಮಾಡೋದ್ರಿಂದ ಕೂದಲು ಉದುರುವಿಕೆಗೆ ಪರಿಹಾರ ಸಿಗಲಿದೆ.