ಗರ್ಭಿಣಿಯರು ಎಲ್ಲಕ್ಕಿಂತ ಹೆಚ್ಚು ತಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗುತ್ತದೆ. ಬಸಿರಿಯರಿಗೆ ಏನೇನೋ ತಿನ್ನುವ ಬಯಕೆ ಕೂಡ ಈ ಸಮಯದಲ್ಲಿ ಹುಟ್ಟಿಕೊಳ್ಳುತ್ತೆ. ಕೆಲವರಿಗೆ ಸಿಹಿ ಇಷ್ಟವಾದರೆ ಇನ್ನು ಕೆಲವರಿಗೆ ಖಾರ ಇಷ್ಟವಾಗುತ್ತೆ. ಮಸಾಲೆ ಪದಾರ್ಥವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಈ ಸಮಯದಲ್ಲಿ ಕೆಲವರ ದೇಹ ಗುಣ ಸೂಕ್ಷ್ಮವಾಗಿರುವುದರಿಂದ ಎಲ್ಲಾ ಪದಾರ್ಥಗಳು ಒಗ್ಗುವುದಿಲ್ಲ. ಗರ್ಭಿಣಿಯರು ಯಾವ ಪದಾರ್ಥಗಳನ್ನು ಸೇವಿಸಬಾರದು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.
ಮೆಂತೆಕಾಳು: ಮೆಂತೆಕಾಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಗರ್ಭಿಣಿಯರು ಇದರಿಂದ ಸ್ವಲ್ಪ ದೂರವಿರುವುದೇ ಒಳ್ಳೆಯದು. ಮೂತ್ರಕೋಶದ ಮೇಲೆ ಇದು ಪ್ರಭಾವ ಬೀರುತ್ತದೆ. ಹಾಗೇ ನೀರಲ್ಲಿ ನೆನೆಸಿಟ್ಟುಕೊಂಡು ತಿನ್ನುವುದು, ಹಸಿಯಾಗಿ ಸೇವನೆ ಮಾಡುವುದರಿಂದ ಕೆಲವರಿಗೆ ಹೊಟ್ಟೆ ತೊಳೆಸಿದಂತಾಗುವುದು ಆ್ಯಸಿಡಿಟಿ ಸಮಸ್ಯೆ, ಗ್ಯಾಸ್ಟಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಬೆಳ್ಳುಳ್ಳಿ: ಇದನ್ನು ಗರ್ಭಿಣಿಯರು ಅತೀಯಾಗಿ ಸೇವಿಸುವುದರಿಂದ ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಬ್ಲೀಡಿಂಗ್ ಸಹ ಉಂಟಾಗುತ್ತದೆ.
ಪುದೀನಾ: ಪುದೀನಾವನ್ನು ಅತೀಯಾಗಿ ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಇದೆಯಂತೆ. ಹಾಗೇ ಮಗುವಿನ ಆರೋಗ್ಯಕ್ಕೂ ಇದು ಒಳ್ಳೆಯದ್ದಲ್ಲವಂತೆ. ಹಾಗಾಗಿ ಪುದೀನಾ ಸೇವನೆ ಹಿತಮಿತವಾಗಿರಲಿ.