ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕ ಹೆಚ್ಚಾಗುವುದು ಸಾಮಾನ್ಯ. ಅವರಿಗೆ ತಿನ್ನುವ ಬಯಕೆ ಇರುವುದರಿಂದ ಹಲವು ಬಗೆಯ ಆಹಾರಗಳನ್ನು ಸೇವಿಸುವುದರಿಂದ ಕೆಲವೊಮ್ಮೆ ಅವರ ದೇಹದ ತೂಕ ಹೆಚ್ಚಾಗುತ್ತದೆ.
ಆದರೆ ಅತಿಯಾದ ತೂಕದಿಂದ ಮಗುವಿಗೆ ಅಪಾಯ ಸಂಭವಿಸಬಹುದು. ಹಾಗಾಗಿ ಗರ್ಭಿಣಿಯರು ತಮ್ಮ ತೂಕವನ್ನು ನಿಯಂತ್ರಸಲು ಈ ಟಿಪ್ಸ್ ಫಾಲೋ ಮಾಡಿ.
*ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹವು ಸದೃಢವಾಗಿರುತ್ತದೆ. ಗರ್ಭಿಣಿಯರು ತಮ್ಮ ತೂಕವನ್ನು ಕೂಡ ನಿಯಂತ್ರಣದಲ್ಲಿಡಬಹುದು.
*ಗರ್ಭಾವಸ್ಥೆಯಲ್ಲಿ ಮಹಿಳೆಯರು ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು, ಪ್ರೋಟೀನ್ ಹೊಂದಿರುವ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ನೀವು ಆರೋಗ್ಯವಾಗಿರುವುದಲ್ಲದೇ ದೇಹದ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.
*ದೇಹದ ತೂಕ ಕಾಪಾಡಿಕೊಳ್ಳುವವರು ಸಕ್ಕರೆಯನ್ನು ನಿಯಂತ್ರಿಸಬೇಕು. ತಂಪು ಪಾನೀಯಗಳು, ಸಿಹಿ ತಿಂಡಿಗಳು, ಹುರಿದ ಆಹಾರಗಳು, ಕೆನೆ ಮತ್ತು ಅಧಿಕ ಸಕ್ಕರೆ ಇರುವ ಆಹಾರದಿಂದ ದೂರವಿರಬೇಕು.