ಗರ್ಭಿಣಿಯರಿಗೆ ದೇಹಕ್ಕೆ ನೀರಿನಂಶ ದೊರಕಿದಷ್ಟೂ ಆರೋಗ್ಯವಾಗಿರುತ್ತಾರೆ. ಹಾಗಂತ ಸಿಕ್ಕ ಸಿಕ್ಕ ಪಾನೀಯ ಸೇವಿಸುವ ಅಗತ್ಯವಿಲ್ಲ.
ಆದರೆ ಈ ಪಾನೀಯಗಳನ್ನು ಸೇವಿಸಲು ಮಾತ್ರ ಮರೆಯಬಾರದು. ಯಾವುದು ಗರ್ಭಿಣಿಯರು ಸೇವಿಸಲೇಬೇಕಾದ ಆ ಪಾನೀಯಗಳು. ಇಲ್ಲಿವೆ ಅದರ ಲಿಸ್ಟ್.
ಹಾಲು
ಗರ್ಭಿಣಿ ಮಹಿಳೆಯರಿಗೆ ದೇಹಕ್ಕೆ ಸಾಕಷ್ಟು ಕಬ್ಬಿಣದಂಶ ಮತ್ತು ಕ್ಯಾಲ್ಶಿಯಂ ಅಗತ್ಯವಿದೆ. ಇದು ಹಾಲಿನಲ್ಲಿ ದೊರಕುತ್ತವೆ. ಇದು ಮಗುವಿನ ಬೆಳವಣಿಗೆಗೂ ಉತ್ತಮ.
ಸೋಯಾ ಮಿಲ್ಕ್
ಹಾಲು ಕೆಲವರಿಗೆ ಇಷ್ಟವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿನಷ್ಟೇ ಪೋಷಕಾಂಶಗಳನ್ನು ಹೊಂದಿರುವ ಸೋಯಾ ಮಿಲ್ಕ್ ಸೇವಿಸಬಹುದು.
ಎಳನೀರು
ಗರ್ಭಾವಸ್ಥೆಯಲ್ಲಿ ದೇಹಕ್ಕೆ ಸಾಕಷ್ಟು ನೀರಿನಂಶ, ಖನಿಜಾಂಶ ಒದಗಿಸಲು ಎಳೆ ನೀರು ಕುಡಿಯಿರಿ. ಇದು ನಿಮ್ಮನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತದೆ.
ಹಣ್ಣಿನ ರಸ
ಎಲ್ಲಾ ಬಗೆಯ ಹಣ್ಣಿನ ರಸವನ್ನು ಸವಿಯಬಹುದು. ಮುಖ್ಯವಾಗಿ ದಾಳಿಂಬೆ ಮತ್ತು ಬಟರ್ ಫ್ರೂಟ್ ಹಣ್ಣಿನ ಜ್ಯೂಸ್ ಗರ್ಭಿಣಿಯರಿಗೆ ಒಳ್ಳೆಯದು. ಹಾಗೆ ಪಪ್ಪಾಯ ಮತ್ತು ಪೈನಾಪಲ್ ಹಣ್ಣಿನಿಂದ ದೂರವಿದ್ದರೆ ಒಳಿತು.