ಗರ್ಭಿಣಿಯರು ನಿತ್ಯ ಜೋಳ ತಿನ್ನುವುದರಿಂದ ಹಲವು ಉಪಯೋಗಗಳು ಆಗುತ್ತವೆ ಎಂಬುದು ನಿಮಗೆ ಗೊತ್ತೇ…? ಜೋಳದಲ್ಲಿ ಮೆಗ್ನೀಷಿಯಂ, ಕಬ್ಬಿಣದ ಅಂಶ, ರಂಜಕ ಹೆಚ್ಚಾಗಿರುವುದರಿಂದ ಇದು ಮಗುವಿಗೂ ಒಳ್ಳೆಯದು ಹಾಗು ತಾಯಿಯ ಮೂಳೆಗಳಿಗೂ ಒಳ್ಳೆಯದು. ಇದು ಕಿಡ್ನಿಯನ್ನು ಆರೋಗ್ಯಕರವಾಗಿರಿಸುತ್ತದೆ.
ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಿಸುತ್ತದೆ. ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆಯನ್ನು ದೂರ ಮಾಡುತ್ತದೆ ಹಾಗೂ ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ವಾರದಲ್ಲಿ ಎರಡು – ಮೂರು ಬಾರಿ ಜೋಳ ತಿನ್ನುವುದರಿಂದ ತ್ವಚೆ ಹೊಳಪು ಪಡೆಯುತ್ತದೆ. ಗರ್ಭಿಣಿಯರ ಆರೋಗ್ಯ ಉತ್ತಮವಾಗಿ ಇರಬೇಕಾದರೆ ಪ್ರತಿದಿನ ಜೋಳ ಸೇವನೆ ಮಾಡಬೇಕು. ಇದರಿಂದ ಫೋಲಿಕ್ ಆಸಿಡ್ ಹೆಚ್ಚುತ್ತದೆ. ಜೋಳವು ಗರ್ಭಿಣಿಯರ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಬಿಡುವುದಿಲ್ಲ.