ಗೋಡಂಬಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ತುಪ್ಪದಲ್ಲಿ ಹುರಿದ ಗೋಡಂಬಿ ತಿನ್ನುತ್ತಾ ಇದ್ದರೆ ಎಷ್ಟು ತಿಂದರೂ ಸಾಲದು ಅನಿಸುತ್ತದೆ. ಗೋಡಂಬಿ ಇಂದ ಮಾಡಿದ ಸಿಹಿ ತಿನಿಸುಗಳು, ಪಾಯಸ, ಹಲ್ವಾ ಎಲ್ಲದಕ್ಕೂ ರುಚಿಯಾಗಿರುತ್ತದೆ ಎನ್ನಬಹುದು. ಆದರೆ ಇಲ್ಲಿ ಗರ್ಭಿಣಿಯರು ಗೋಡಂಬಿ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೊಣ.
ಗೋಡಂಬಿಯಲ್ಲಿ ಝಿಂಕ್ ಹೇರಳವಾಗಿದೆ. ಇದು ಮಗುವಿನ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಹಾಗೇ ಗೋಡಂಬಿಯಲ್ಲಿ ಕ್ಯಾಲ್ಸಿಯಂ ಅಂಶವು ಇರುವುದರಿಂದ ಮಗುವಿನ ಮೂಳೆಯ ಬೆಳವಣಿಗೆಗ ಇದು ಸಹಕಾರಿಯಾಗಿದೆ.
ಇನ್ನು ಗೋಡಂಬಿಯಲ್ಲಿ ಕಬ್ಬಿಣದಂಶ ಇದೆ. ಕಬ್ಬಿಣದಂಶವು ಕೆಂಪು ರಕ್ತ ಕಣಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ. ಹಾಗೇ ಗರ್ಭಿಣಿಯರಿಗೆ ಸುಸ್ತಾಗದಂತೆ ಕಾಪಾಡುತ್ತದೆ.
ಗೋಡಂಬಿಯಲ್ಲಿ ನಾರಿನಾಂಶವು ಹೆಚ್ಚಿರುತ್ತದೆ. ಇದು ಗರ್ಭಿಣಿಯರಿಗೆ ಮಲಬದ್ಧತೆಯಾಗದಂತೆ ಕಾಪಾಡುತ್ತದೆ. ಗೋಡಂಬಿಯಲ್ಲಿರುವ ಮೆಗ್ನೇಷಿಯಂನಿಂದ ಗರ್ಭಿಣಿಯರಿಗೆ ತಲೆನೋವು, ಮೈಗ್ರೇನ್ ಬಾರದಂತೆ ತಡೆಯುತ್ತದೆ. ಇದರಲ್ಲಿನ ಪೋಟ್ಯಾಷಿಯಂ ಅಧಿಕ ರಕ್ತದೊತ್ತಡವನ್ನು ಸಮತೋಲನದಲ್ಲಿರಿಸುತ್ತದೆ.
ಹಾಗೇ ಎಲ್ಲರಿಗೂ ಈ ಗೋಡಂಬಿ ಆಗಿಬರುವುದಿಲ್ಲ. ಕೆಲವರಿಗೆ ಇದನ್ನು ಸೇವಿಸಿದರೆ ಅಲರ್ಜಿ ಆಗುತ್ತದೆ. ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ.
ಇನ್ನು ಅತೀಯಾಗಿ ಸೇವಿಸುವುದರಿಂದ ಸೋಡಿಯಂ ಲೆವಲ್ ಜಾಸ್ತಿಯಾಗುತ್ತದೆ. ಇದು ರಕ್ತದೊತ್ತಡವನ್ನು ಅಸಮತೋಲನಗೊಳಿಸುತ್ತದೆ.
ಕೊಲೆಸ್ಟ್ರಾಲ್ ಅನ್ನು ಕೂಡ ಹೆಚ್ಚಿಸುವ ಸಾಧ್ಯತೆ ಇದೆ. ಹಾಗಾಗಿ ಹಿತಮಿತವಾಗಿ ತಿಂದರೆ ಒಳ್ಳೆಯದು.