ಗರ್ಭಿಣಿಯರು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಹೊಟ್ಟೆಯಲ್ಲಿ ಮಗುವನ್ನು ಜೋಪಾನ ಮಾಡುವ ತಾಯಿ, ಊಟ, ತಿಂಡಿ ಜೊತೆಗೆ ಮಾನಸಿಕವಾಗಿಯೂ ಸಂತೋಷದಿಂದಿರಬೇಕು. ಇದನ್ನು ಯಾಕಿಷ್ಟು ಒತ್ತಿ ಹೇಳುತ್ತಿದ್ದೇವೆಂದರೆ ಗರ್ಭಿಣಿ ಮಾನಸಿಕ ಒತ್ತಡಕ್ಕೆ ಒಳಗಾದರೆ ಅದು ಮಗುವಿನ ಮೆದುಳಿನ ಮೇಲೆ ಪರಿಣಾಮ ಉಂಟುಮಾಡುತ್ತದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ಸಂಶೋಧಕರ ಪ್ರಕಾರ, ಪ್ರಸವಪೂರ್ವದಲ್ಲಿ ಮಹಿಳೆಯಲ್ಲಿ ತೀವ್ರ ತರಹದ ಖಿನ್ನತೆ, ಮಾನಸಿಕ ಒತ್ತಡ, ಆತಂಕಗಳಿದ್ದಲ್ಲಿ ಗರ್ಭದಲ್ಲಿರುವ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಗುವಿನ ಮೆದುಳಿನ ಬೆಳವಣಿಗೆ ಮೇಲೂ ಇದು ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ.
ಹೀಗಾಗಿ ತಾಯಿ ಮಾಡುವ ಆಲೋಚನೆ, ಚಿಂತನೆ ಎಲ್ಲವೂ ಮಗುವಿನ ಮೇಲೆ ಪ್ರಭಾವ ಬೀರುವುದರಿಂದ ಸಾಕಷ್ಟು ಒಳ್ಳೆಯ ಧನಾತ್ಮಕ ಆಲೋಚನೆಯೊಂದಿಗೆ ಸಂತೋಷದಿಂದಿರುವುದು ತಾಯಿ ಹಾಗೂ ಮಗುವಿನ ದೃಷ್ಟಿಯಿಂದ ಒಳ್ಳೆಯದು.