ಬೇಸಿಗೆಯಲ್ಲಿ ಎಳನೀರು ಸೇವನೆ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಗರ್ಭಿಣಿಯರು ಪ್ರತಿ ನಿತ್ಯ ಎಳನೀರು ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಎಳನೀರಿನಲ್ಲಿ ಕೊಬ್ಬಿನಾಂಶವಿಲ್ಲ. ಇದು ದೇಹವನ್ನು ತಂಪಾಗಿಡುತ್ತದೆ ಮಾತ್ರವಲ್ಲ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ. ಹೊಟ್ಟೆಯಲ್ಲಿರುವ ಮಗುವಿಗೂ ಎಳನೀರು ಒಳ್ಳೆಯದು.
ಇದರಲ್ಲಿ ಸಕ್ಕರೆ, ಪ್ರೊಟೀನ್ ಮತ್ತು ಸೋಡಿಯಂ ಅಂಶವಿದ್ದು ಇದು ಎಲೆಕ್ಟ್ರೋಲೈಟ್ ಅನ್ನು ದೇಹಕ್ಕೆ ಒದಗಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ಸೋಂಕು ಸಮಸ್ಯೆಗಳು ದೂರವಾಗುತ್ತವೆ.
ಇದರಲ್ಲಿ ಕಡಿಮೆ ಕ್ಯಾಲರಿಗಳಿವೆ. ಇದು ಗರ್ಭಿಣಿಯರಿಗೆ ತೂಕ ಸಮತೋಲನದಲ್ಲಿಡಲು ಸಹಕಾರಿ. ಜೀರ್ಣಕ್ರಿಯೆಯನ್ನು ಉತ್ತಮ ಪಡಿಸುತ್ತದೆ. ಇದರಿಂದ ಗರ್ಭಿಣಿಯರ ಮಾರ್ನಿಂಗ್ ಸಿಕ್ ನೆಸ್ ಸಮಸ್ಯೆಯೂ ದೂರವಾಗುತ್ತದೆ.