ಆರೋಗ್ಯಕರ, ಬುದ್ಧಿವಂತ ಮಕ್ಕಳು ಜನಿಸಲಿ ಎಂಬುದು ಪ್ರತಿ ತಾಯಿಯ ಬಯಕೆ. ಒಂಭತ್ತು ತಿಂಗಳು ತಾಯಿಯ ಹೊಟ್ಟೆಯಲ್ಲಿ ಮಗು ಹೇಗಿರುತ್ತದೆ? ಅದ್ರ ಬೆಳವಣಿಗೆ ಹೇಗಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಮಗುವಿನ ಬೆಳವಣಿಗೆ ಬಗ್ಗೆ ಹೇಳಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಹಾಗೂ ಗರ್ಭಕ್ಕೆ ಸಂಬಂಧವಿದೆ. ಗ್ರಹ ತನ್ನ ಸ್ವಭಾವಕ್ಕನುಗುಣವಾಗಿ ಮಕ್ಕಳ ಶಾರೀರದ ಬೆಳವಣಿಗೆ ಮಾಡುತ್ತದೆ. ಯಾವುದಾದ್ರೂ ಗ್ರಹ ದುರ್ಬಲವಾಗಿದ್ದರೆ ಅದನ್ನು ಬಲಪಡಿಸುವ ವಿಧಾನವನ್ನು ಶಾಸ್ತ್ರದಲ್ಲಿಯೇ ಹೇಳಲಾಗಿದೆ.
ಗರ್ಭದ ಮೊದಲ ತಿಂಗಳವರೆಗೆ ಶುಕ್ರನ ಪ್ರಭಾವವಿರುತ್ತದೆ. ಈ ಸಮಯದಲ್ಲಿ ಶುಕ್ರ ದುರ್ಬಲನಾಗಿದ್ದರೆ ಈ ದಿನಗಳಲ್ಲಿ ಶುಕ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಡಿ. ಶುಕ್ರನ ಬಲ ಹೆಚ್ಚಿದ್ದರೆ ಹುಟ್ಟುವ ಮಕ್ಕಳು ತುಂಬಾ ಸುಂದರವಾಗಿರುತ್ತಾರೆ.
ಎರಡನೇ ತಿಂಗಳು ಮಂಗಳನ ತಿಂಗಳಾಗಿರುತ್ತದೆ. ಮಂಗಳ ಗ್ರಹ ಬಲಪಡಿಸಲು ಕೆಂಪು ಬಟ್ಟೆಯನ್ನು ಧರಿಸಿ.
ಮೂರನೇ ತಿಂಗಳು ಗುರು ಪ್ರಭಾವ ಹೆಚ್ಚಿರುತ್ತದೆ. ಹಳದಿ ಬಟ್ಟೆಯನ್ನು ಹೆಚ್ಚಾಗಿ ಧರಿಸಿ. ಗುರು ಬಲ ಹೆಚ್ಚಾಗುವಂತ ಉಪಾಯಗಳನ್ನು ಪಾಲನೆ ಮಾಡಿ.
ನಾಲ್ಕನೇ ತಿಂಗಳು ಸೂರ್ಯನ ಪ್ರಭಾವ ಹೆಚ್ಚಿರುತ್ತದೆ. ಸೂರ್ಯ ಗ್ರಹ ಬಲ ಹೆಚ್ಚಾಗುವ ಕೆಲಸ ಮಾಡಿ.
ಐದನೇ ತಿಂಗಳು ಚಂದ್ರನ ತಿಂಗಳಾಗಿರುತ್ತದೆ. ಚಂದ್ರ ತಾಯಿ ಹಾಗೂ ಮನಸ್ಸಿನ ಗ್ರಹವಾಗಿದೆ. ಚಂದ್ರನ ಬಲ ಹೆಚ್ಚಾಗುವ ಕೆಲಸ ಮಾಡಿ. ಯಾಕೆಂದ್ರೆ ಜೀವನದ ಪ್ರತಿ ಕಾರ್ಯಕ್ಕೂ ಚಂದ್ರ ಸಂಬಂಧ ಹೊಂದಿರುತ್ತಾನೆ.
ಆರನೇ ತಿಂಗಳು ಶನಿ ತಿಂಗಳು. ಏಳನೇ ತಿಂಗಳು ಬುಧನ ಪ್ರಭಾವವಿರುತ್ತದೆ. ಬುಧ ಹಾಗೂ ಶನಿ ಗ್ರಹ ಬಲ ಹೆಚ್ಚಾಗುವ ಕೆಲಸ ಮಾಡಬೇಕು.
ಎಂಟನೇ ತಿಂಗಳು ಚಂದ್ರನದಾಗಿದ್ದರೆ 9ನೇ ತಿಂಗಳು ಸೂರ್ಯನ ಪ್ರಭಾವಕ್ಕೊಳಗಾಗಿರುತ್ತದೆ.
ಗರ್ಭಿಣಿಯಾದವಳು ಸೂರ್ಯನ ಶಾಖಕ್ಕೆ ದೇಹವೊಡ್ಡಬೇಕು. ಸೂರ್ಯನ ಕಿರಣಗಳು ಬಿದ್ದ ಮಗು ಬಲ ಹಾಗೂ ಪ್ರತಿಭಾವಂತ ಮಗುವಾಗುತ್ತದೆ. ಇದಕ್ಕೆ ದುರ್ಯೋಧನ ಉತ್ತಮ ಉದಾಹರಣೆ.